ಢಾಕಾ: ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪನದ ಕೇಂದ್ರ ಬಿಂದು ಢಾಕಾದಿಂದ 50 ಕಿ.ಮೀ ದೂರದಲ್ಲಿರುವ ನರ್ಸಿಂಗ್ದಿಯ 10 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನೊಂದೆಡೆ ಕೋಲ್ಕತಾದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೆಲವೆಡೆ ಭೂಮಿ ಕಂಪಿಸ್ದ ಅನುಭವವಾಗಿದೆ. ಈಶಾನ್ಯ ಭಾರತದ ಗುವಾಹಟಿ, ಅಗರ್ತಲ, ಶಿಲ್ಲಾಂಗ್ ಸೇರಿದಂತೆ ಹಲವೆಡೆ ಕೂಡ ಭೂಕಂಪ ಸಂಭವಿಸಿದೆ.
