ದಾವಣಗೆರೆ: ವಿಧಾನಸಭಾ ಚುನವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನೊಂದೆಡೆ ರಾಜ್ಯದ ಹಲವೆಡೆ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಪರ ಬೆಟ್ಟಿಂಗ್ ಕಟ್ಟಲು ಕಾಂಗ್ರೆಸ್ ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ಇಲ್ಲಿನ ಚೀಲನಹಳ್ಳಿಯಲ್ಲಿ ಜೆಡಿಎಸ್ ಪರ ದುಡ್ಡು ಕೊಟ್ಟೋರಿಗೆ ಕಾಂಗ್ರೆಸ್ ಕಾರ್ಯಕರ್ತರು 80 ಸಾವಿರಕ್ಕೆ 1 ಲಕ್ಷದಂತೆ ಬಾಜಿ ಕಟ್ಟಲು ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ಕೆ ಎನ್ ರಾಜಣ್ಣ ಗೆದ್ದರೆ 80 ಸಾವಿರ, ಜೆಡಿಎಸ್ ಗೆದ್ದರೆ 1 ಲಕ್ಷ ನಿಡುವುದಾಗಿ ಬೆಟ್ಟಿಂಗ್ ಕಟ್ಟಿದ್ದಾರೆ.
ಇನ್ನೊಂದೆಡೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿಯೂ ಬೆಟ್ಟಿಂಗ್ ಗೆ ಕಾರ್ಯರ್ತರು ಡಂಗುರ ಸಾರಿ ಆಹ್ವಾನ ನೀಡಿದ್ದಾರೆ.
ಹೊನ್ನಾಳಿಯ ಕಾಂಗ್ರೆಸ್ ಪಕ್ಷದ ಡಿ.ಜಿ. ಶಾಂತನಗೌಡ ಗೆಲುವು ಸಾಧಿಸಲಿದ್ದಾರೆ. ಯಾರಾದೂ ಬೆಟ್ಟಿಂಗ್ ಕಟ್ಟುವವರಿದ್ದರೆ ದೇವಸ್ಥಾನದ ಕಡೆ ಬನ್ನಿ ಎಂದು ಗೋಣಿಗಿರಿ ಗ್ರಾಮದಲ್ಲಿ ಡಂಗುರ ಬಾರಿಸಿ ಆಹ್ವಾನ ನೀಡಲಾಗಿದೆ.