BIG NEWS: ಕೆಎಂಸಿ ಆಸ್ಪತ್ರೆ ಇಬ್ಬರು ವೈದ್ಯರು ಸಸ್ಪೆಂಡ್

ಮಂಗಳೂರು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಂಸಿ ಯ ಇಬ್ಬರು ವೈದ್ಯರನ್ನು ಕೆಲಸದಿಂದ ವಜಾ ಮಾಡಿ ಆಸ್ಪತ್ರೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಅತ್ತಾವರ ಕೆಎಂಸಿ ಅಸ್ಪತ್ರೆ ಮೆಡಿಕಲ್ ಆಫೀಸರ್ ಡಾ.ಸಮೀರ್ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಅವರನ್ನು ಆಡಳಿತ ಮಂಡಳಿ ವಜಾ ಮಾಡಿ ಗುತ್ತಿಗೆ ರದ್ದುಪಡಿಸಿ ಆದೇಶ ಹೊರಡಿಸಿದೆ.

ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ನಾದಿಯಾ ಸಿರಾಜ್, ಡಾ.ವರ್ಷಿಣಿ ಪ್ರತಿ, ಡಾ.ರಿಯಾ ಚಡ್ಡಾ, ಡಾ.ಇರಾ ಬಾಸಿನ್, ಡಾ.ಕ್ಷಿತಿಜ್ ಗುಪ್ತಾ, ಡಾ.ವಿ.ಎಸ್.ಹರ್ಷಕುಮಾರ್ ಸೇರಿದಂತೆ 7 ಮೆಡಿಕಲ್ ವಿದ್ಯಾರ್ಥಿಗಳನ್ನು ಕೂಡ ಕಾಲೇಜು ಆಡಳಿತ ಮಂಡಳಿ ಸ್ಪಸ್ಪೆಂಡ್ ಮಾಡಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read