ಬೆಂಗಳೂರು: ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಸಮರ ತಾರಕಕ್ಕೇರಿದ್ದು, ಈ ಮಧ್ಯೆ ದಿ. ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಮಾಡಿರುವ ಟ್ವೀಟ್ ಕುತೂಹಲಕ್ಕೆ ಕಾರಣವಾಗಿದೆ.
ರೋಹಿಣಿ ಸಿಂಧೂರಿ ವಿರುದ್ಧದ ಸಾಲು ಸಾಲು ಆರೊಪಗಳ ನಡುವೆ ಡಿ.ರೂಪಾ, ಡಿ.ಕೆ.ರವಿ ಬಗ್ಗೆಯೂ ಪ್ರಸ್ತಾಪಿಸಿ ರೋಹಿಣಿ ವಿರುದ್ಧ ಕಿಡಿಕಾರಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಡಿ.ಕೆ.ರವಿ ಪತ್ನಿ ಕುಸುಮಾ ಟ್ವೀಟ್ ಮಾಡಿದ್ದು, ಕರ್ಮ ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಅದು ಶೀಘ್ರವಾಗಿಯಾದರೂ ಆಗಿರಬಹುದು ಅಥವಾ ನಿಧಾನವಾಗಿಯಾದರೂ ಆಗಬಹುದು. ನೀವು ಮಾಡಿದ ಕರ್ಮ ನಿಮ್ಮನ್ನು ಬಿಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಡಿ.ಕೆ.ರವಿ ಪತ್ನಿ ಕುಸುಮಾ ಈಗ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಗ್ರಾಸವಾಗಿದೆ.
https://twitter.com/KusumaH_INC/status/1627262006326853632?ref_src=twsrc%5Etfw%7Ctwcamp%5Etweetembed%7Ctwterm%5E1627262006326853632%7Ctwgr%5E1bf06b23f9428b4a8dec6907ea02e9aec7ad59a4%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2023%2Ffeb%2F19%2Fdk-ravis-wife-tweets-soon-after-ips-officer-d-roopa-moudgils-allegations-against-ias-officer-rohini-sindhuri-487797.html