BIG NEWS: ಕಾಂಗ್ರೆಸ್ ನ ಬೋಗಸ್ ಘೋಷಣೆ ಸರಣಿ ಮುಂದುವರೆದಿದೆ; ಸಿಎಂ ವ್ಯಂಗ್ಯ

ಹುಬ್ಬಳ್ಳಿ: ಕಾಂಗ್ರೆಸ್ ನ ಬೋಗಸ್ ಕಾರ್ಡ್ ನ ಗ್ಯಾರಂಟಿ ಸರಣಿ ಮುಂದುವರೆದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನ ನಾಲ್ಕನೇ ಗ್ಯಾರಂಟಿ ಯೋಜನೆ ಯುವನಿಧಿಯಡಿ ಪದವೀಧರರಿಗೆ 3000 ರೂ. ಘೋಷಣೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸೋಲಿನ ಹತಾಶೆಯಿಂದ ಕಾಂಗ್ರೆಸ್ ಬೋಗಸ್ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡುತ್ತಿದೆ. ಇದು ನಾಲ್ಕನೇಯದ್ದು, ಈಗಾಗಲೇ ಮೂರು ಬೋಗಸ್ ಘೋಷಣೆ ಮಾಡಿದೆ ಎಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿ ಕರ್ನಾಟಕದ ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಆದರೆ ರಾಜ್ಯದ ಜನ ಮರುಳಾಗಲ್ಲ, ಈ ಹಿಂದೆ ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿ ತಿಂಗಳು ಮಾಶಾಸನ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಘೋಷಿಸಿದರು. ಈವರೆಗೂ ಕೊಟ್ಟಿಲ್ಲ. ಛತ್ತೀಸ್ ಗಢದಲ್ಲಿ 1500 ರೂಪಾಯಿ ಕೊಡುತ್ತೇವೆ ಎಂದರು. ಅದನ್ನೂ ಕೊಡಲಿಲ್ಲ. ಹೀಗೆ ನಾಲ್ಕು ರಾಜ್ಯಗಳಲ್ಲಿ ಭರವಸೆಗಳನ್ನು ನೀಡಿ ಎಲ್ಲಿಯೂ ನಡೆದುಕೊಂಡಿಲ್ಲ. ಈಗ ಕರ್ನಾಟಕದಲ್ಲಿ ಸುಳ್ಳು ಭರವಸೆ ಕೊಡುತ್ತಿದ್ದಾರೆ. ಕಾರಣ ಅವರು ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read