BIG NEWS: ಕಾಂಗ್ರೆಸ್ ದರೋಡೆಕೋರರ ಕೂಟ; ಅವರು ಧರ್ಮಾತ್ಮರಾಗಿದ್ದರೆ 16 ಜನ ಪಕ್ಷ ಬಿಟ್ಟು ಯಾಕೆ ಓಡಿ ಹೋಗ್ತಿದ್ರು ? ಸಚಿವ ಆರ್. ಅಶೋಕ್ ವಾಗ್ದಾಳಿ

ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯದಲ್ಲಿ ಚುನಾವಣೆ ಚಟುವಟಿಕೆಗಳು ಚುರುಕುಗೊಂಡಿವೆ. ಇದೇ ವೇಳೆ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವಿನ ವಾಕ್ಸಮರವೂ ತಾರಕಕ್ಕೇರಿದೆ. ಕಾಂಗ್ರೆಸ್ ನವರದ್ದು ದರೋಡೆಕೋರರ ಕೂಟ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಆರ್. ಅಶೋಕ್, ಸಿದ್ದರಾಮಯ್ಯನವರ ಸಂಪುಟ ಇದ್ದಾಗ ರಾಜ್ಯಕ್ಕೆ ಏನಾದ್ರೂ ಒಳ್ಳೆಯದಾಗಿದ್ಯಾ ? ಕಾಂಗ್ರೆಸ್ ನಾಯಕರು ಧರ್ಮಾತ್ಮರಾಗಿದ್ದರೆ ಅವರ ಪಕ್ಷ ಬಿಟ್ಟು 16 ಜನ ಯಾಕೆ ಓಡಿಹೋದ್ರು ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನವರು ಸರಿಯಿಲ್ಲ, ಅವರು ಬರಿ ನೀರು ಹಾಕಿ ತೊಳೆದರೆ ಸಾಲದು, ಗಂಜಳ ಹಾಕಿ ತೊಳೆಯಬೇಕು. ಅಂದಾಗ ಮಾತ್ರ ಪಾಪ ಹೋಗುವುದು. ಕಾಂಗ್ರೆಸ್ ನವರು ಎಲ್ಲೆಲ್ಲಿ ಹೋಗ್ತಿದ್ದಾರೆ ಅಲ್ಲೆಲ್ಲ ಗಂಜಳ ಹಾಕಿ ತೊಳೆದಾಗ ಮಾತ್ರ ಪಾಪ ಹೋಗುತ್ತದೆ ಎಂದು ವಾಕ್ಪ್ರಹಾರ ನಡೆಸಿದ್ದಾರೆ.

ಐದು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವಿದ್ದಾಗ ಜನರಿಗೆ ಮೋಸ ಮಾಡಿದರು. ಪಕ್ಷದಿಂದ 16 ಜನ ಓಡಿ ಹೋದರು. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಕಾಂಗ್ರೆಸ್ ನವರು ಈಗ ಮತ್ತೆ ಮತ ಕೇಳಲು ಜನರ ಮುಂದೆ ಹೋಗುತ್ತಿದ್ದಾರೆ. ಯಾತ್ರೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಭ್ರಮನಿರಸನವಾಗಲಿದೆ ಎಂದು ಕಿಡಿಕಾರಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read