BIG NEWS: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ನಾಳೆ ಬಿಡುಗಡೆ ಸಾಧ್ಯತೆ; ಸತೀಶ್ ಜಾರಕಿಹೊಳಿ ಸುಳಿವು

ಬೆಳಗಾವಿ: ಎಲ್ಲಾ ಆಯಾಮಗಳಿಂದ ಸರ್ವೆ ಮಾಡಿ ಹೈಕಮಾಂಡ್ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸ್ಥಳೀಯ ನಾಯಕರ ಅಭಿಪ್ರಾಯ, ಕೆಲ ಕ್ಷೇತ್ರಗಳ ಆಕಾಂಕ್ಷಿಗಳ ಒಮ್ಮತದ ನಿರ್ಧಾರ ಪಡೆದು ಹೈಕಮಾಂಡ್ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಮೂರನೇ ಪಟ್ಟಿ ಕೂಡ ಅತಿ ಶೀಘ್ರ ಬಿಡುಗಡೆಯಾಗಲಿದೆ.

ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ನಾಳೆಯೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಮತದಾರರ ಮನೆ ಮನೆಗೆ ತಲುಪಬೇಕು. ಕೆಲ ಕ್ಷೇತ್ರಗಳಲ್ಲಿ ಹೊಸಬರಿಗೆ, ಇನ್ನು ಕೆಲ ಕ್ಷೇತ್ರಗಳಲ್ಲಿ ಹಳಬರಿಗೆ ಟಿಕೆಟ್ ನೀಡಲಾಗಿದೆ. ಅಭ್ಯರ್ಥಿಗಳು ಮತದಾರರ ಮನಗೆಲ್ಲುವುದು ಮುಖ್ಯ ಎಂದರು.

ಇದೇ ವೇಳೆ ನಟ ಸುದೀಪ್ ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಸುದೀಪ್ ಅವರ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಸಿಎಂ ಹೇಳುತ್ತಿದ್ದಾರೆ ಸುದೀಪ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಪಕ್ಷದ ಪರ ಪ್ರಚಾರ ಮಾಡ್ತಾರೆ ಎಂದು. ಸುದೀಪ್ ಹೇಳುತ್ತಿದ್ದಾರೆ ನನಗೆ ಬೇಕಾದ ವ್ಯಕ್ತಿಗಳ ಪರ ಪ್ರಚಾರ ಮಾಡ್ತೇನೆ ಎಂದು. ಸುದೀಪ್ ಅವರ ಅಭಿಮಾನಿಗಳು ಎಲ್ಲಾ ಪಕ್ಷದಲ್ಲಿಯೂ ಇದ್ದಾರೆ. ಅವರ ಈ ನಿಲುವಿನಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read