BIG NEWS: ಎಂಟಿಬಿ ನಾಗರಾಜ್ ವ್ಯಂಗ್ಯಕ್ಕೆ ಶಾಸಕ ಶರತ್ ಬಚ್ಚೇಗೌಡ ಕಿಡಿ; 70 ವರ್ಷದವರಾಗಿ, ರಾಜ್ಯದ ಮಂತ್ರಿಯಾಗಿ ಮಾನ ಮರ್ಯಾದೆ ಇಲ್ವಾ ಎಂದು ವಾಗ್ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಹೊಸಕೋಟೆಯ ಪಾರ್ವತಿಪುರದಲ್ಲಿ ಶರತ್ ಬಚ್ಚೇಗೌಡ ಪರ ಚುನಾವಣ ಅಪ್ರಚಾರಕ್ಕೆ ಪತ್ನಿ ಪ್ರತಿಭಾ ಆಗಮಿಸಿದ್ದ ವೇಳೆ ಬ್ಯಾಗ್ ಹಾಗೂ ಮೊಬೈಲ್ ಕಳ್ಳತನವಾಗಿದ್ದಕ್ಕೆ ಪ್ರತಿಭಾ ಕಣ್ಣೀರಿಟ್ಟಿದ್ದರು. ಈ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಚುನಾವಣಾ ಪ್ರಚಾರದ ವೇಳೆ ಅಣಕಿಸಿ, ವ್ಯಂಗ್ಯವಾಡಿದ್ದರು. ಸಚಿವರ ನಡೆಗೆ ಶರತ್ ಬಚ್ಚೆಗೌಡ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಶರತ್ ಬಚ್ಚೇಗೌಡ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ಶರತ್ ಪತ್ನಿ ಪ್ರತಿಭಾ ಕಾರಿನಲ್ಲಿ ಬ್ಯಾಗ್, ಮೊಬೈಲ್ ಬಿಟ್ಟು ತೆರಳಿದ್ದರು. ಕಿಡಿಗೇಡಿಗಳು ಕಾರಿನ ಗಾಜು ಒಡೆದು ಬ್ಯಾಗ್, ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದರು. ಈ ಘಟನೆ ಬಗ್ಗೆ ಶಾಸಕರ ಪತ್ನಿ ಕಣ್ಣೀರಿಟ್ಟಿದ್ದರು. ಇದನ್ನೇ ರಾಜಕೀಯವಾಗಿ ಬಳಸಿಕೊಂಡ ಎಂಟಿಬಿ ನಾಗರಾಜ್ ನಿನ್ನೆ ಪ್ರಚಾರದ ವೇಳೆ ಶಾಸಕರ ಪತ್ನಿ ಬ್ಯಾಗ್ ಕಳುವಾಗಿದೆ ಎಂದು ಕಣ್ಣೀರಿಟ್ಟು ಡ್ರಾಮಾ ಮಾಡುತ್ತಿದ್ದಾರೆ ಎಂದು ಅಣಕ ಮಾಡಿ ತೋರಿಸಿದ್ದರು. ಸಚಿವರ ವ್ಯಂಗ್ಯದ ಮಾತಿಗೆ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆ ಹೊಡೆದು ನಕ್ಕಿದ್ದರು.

ಸಚಿವ ಎಂಟಿಬಿ ವಿರುದ್ಧ ಕಿಡಿಕಾರಿರುವ ಶಾಸಕ ಶರತ್ ಬಚ್ಚೇಗೌಡ, ಓರ್ವ ಹೆಣ್ಣುಮಗಳು ಘಟನೆಯಿಂದ ಗಾಬರಿಯಾಗಿ ಕಣ್ಣೀರಿಟ್ಟರೆ ಅದನ್ನು ಅಣಕಿಸಿ ಪುಂಡರ ನಡುವೆ ಮನರಂಜನೆ ಮಾಡುತ್ತಿದ್ದಾರೆ. ನಿಮ್ಮ ಮನೆ ಹೆಣ್ಣುಮಗಳಿಗೆ ಈ ರೀತಿ ಆದ್ರೆ ಸುಮ್ಮನಿರುತ್ತಿದ್ರಾ? 70 ವರ್ಷವಾಗಿದೆ, ರಾಜ್ಯದ ಮಂತ್ರಿಯಾಗಿದ್ದೀರಾ ಹೆಣ್ಣುಮಗಳು ಕಣ್ಣೀರಿಟ್ಟರೆ ಪುಂಡರನ್ನು ಸೇರಿಸಿ ನಗುತ್ತಿದ್ದೀರಾ? ನಿಮಗೆ ಮಾನ ಮರ್ಯಾದೆ ಇಲ್ವಾ? ಎಂದು ಕೆಂಡಾಮಂಡಲರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read