BIG NEWS: ಉರಿಗೌಡ, ನಂಜೇಗೌಡ ವಿವಾದ; ಸುವರ್ಣ ಮಂಡ್ಯ ಪುಸ್ತಕದಲ್ಲಿರುವ ಉಲ್ಲೇಖವಾದರೂ ಏನು?

Exclusive-ಉರಿಗೌಡ-ನಂಜೇಗೌಡ ಸಿನಿಮಾ ಮಾಡಲಿದ್ದಾರೆ ಸಚಿವ ಮುನಿರತ್ನಬೆಂಗಳೂರು: ವಿಧಾನಸಭಾ ಚುನಾವಣೆ ಕಾವೇರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಉರಿಗೌಡ, ನಂಜೇಗೌಡ ವಿವಾದ ತಾರಕಕ್ಕೇರಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಟಿಪ್ಪು ಕೊಂದದ್ದು ಉರಿಗೌಡ ಹಾಗೂ ನಂಜೇಗೌಡ ಎಂಬ ಬಿಜೆಪಿ ವಾದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇದು ಬಿಜೆಪಿಯ ಕಟ್ಟು ಕಥೆ. ಉರಿಗೌಡ, ನಂಜೇಗೌಡರು ಟಿಪ್ಪು ಕೊಂದಿದ್ದು ಎಂಬುದು ಸುಳ್ಳು. ಇತಿಹಾಸದಲ್ಲಿಯೇ ಇರದ ವಿಚಾರವನ್ನು ಹೇಳಿ ಬಿಜೆಪಿ, ಜನರ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದೀಗ ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ವಿಚಾರದ ಪುಸ್ತಕವೊಂದು ಚರ್ಚೆಗೆ ಬಂದಿದ್ದು, ಸುವರ್ಣ ಮಂಡ್ಯ ಪುಸ್ತಕದಲ್ಲಿ ಈ ಹೆಸರು ಉಲ್ಲೇಖವಾಗಿದೆ.

ಡಾ. ದೇ ಜವರೇಗೌಡ ಅವರ ಸಂಪಾದಕತ್ವದಲ್ಲಿ 2006ರಲ್ಲಿ ಬಿಡುಗಡೆಗೊಂಡ ಪ್ರೊ.ಜಯಪ್ರಕಾಶ್ ಗೌಡರ ಪರಿಷ್ಕೃತ ಆವೃತ್ತಿ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಹೆಸರು ಪ್ರಸ್ತಾಪವಾಗಿದೆ. 500 ಪುಟಗಳ ಪುಸ್ತಕದಲ್ಲಿ ಮಂಡ್ಯದ ಇತಿಹಾಸದ ಬಗ್ಗೆ ಇದೆ. ಇದರಲ್ಲಿ ಟಿಪ್ಪು ವಿರುದ್ಧ ಉರಿಗೌಡ, ನಂಜೇಗೌಡ ಎಂಬುವವರು ಸಿಡಿದೆದ್ದಿದ್ದರು ಎಂದು ಬರೆಯಲಾಗಿದೆ. ಆದರೆ ಟಿಪ್ಪುವನ್ನು ಕೊಂದಿದ್ದು ಉರಿಗೌಡ, ನಂಜೇಗೌಡ ಎಂದು ಎಲ್ಲಿಯೂ ಪ್ರಸ್ತಾಪವಾಗಿಲ್ಲ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read