BIG NEWS: ಉರಿಗೌಡ, ನಂಜೇಗೌಡ ವಿವಾದ; ಪುತ್ಥಳಿಯನ್ನಾದರೂ ಮಾಡಲಿ, ದೇವಸ್ಥಾನವನ್ನಾದರು ಕಟ್ಟಲಿ; ಬಿಜೆಪಿಯಿಂದ ಮತ ಸೆಳೆಯಲು ಸಾಧ್ಯವಿಲ್ಲ; HDK ಟಾಂಗ್

ಮಂಡ್ಯ: ಬಿಜೆಪಿಯವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಜಾತಿ ರಾಜಕಾರಣ ಮಾಡಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಉರಿಗೌಡ, ನಂಜೇಗೌಡ ಕುರಿತ ಸಿನಿಮಾ ನಿರ್ಮಾಣ ವಿಚಾರವಾಗಿ ಅವರು ಸಿನಿಮಾ ತೆಗೆದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಎಂದು ಪುಸ್ತಕದಲ್ಲಿ ನಮೂದಿಸಿದ್ದಾರಾ ? 500 ವರ್ಷಗಳ ಹಿಂದಿನ ಕಥೆಯನ್ನು ಹೇಳಿದರೆ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಅವರ ಪುತ್ಥಳಿಯನ್ನಾದರೂ ನಿರ್ಮಿಸಲಿ, ದೇವಸ್ಥಾನವನ್ನಾದರೂ ಕಟ್ಟಲಿ. ಬಿಜೆಪಿಯವರಿಂದ ಒಕ್ಕಲಿಗರ ಮತ ಸೆಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read