ಬೆಂಗಳೂರು: ಇಂದಿನಿಂದ ಬೇಕರಿ, ಕಾಂಡಿಮೆಂಟ್ಸ್ ಮಾಲೀಕರು ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ವಿರೋಧಿಸಿ ಪ್ರತಿಭಟನೆ ಕೈಕೊಂಡಿದ್ದಾರೆ.
ಇಂದು ಬೇಕರಿಯಲ್ಲಿ ಹಾಲು, ಮೊಸರು, ಮಜ್ಜಿಗೆ, ಕಾಫಿ, ಟೀ ಸಿಗುವುದಿಲ್ಲ.
ನಾಳೆ ಸಿಗರೇಟ್, ಗುಟ್ಕಾ ಇನ್ನಿತರ ವಸ್ತು ಸಿಗುವುದಿಲ್ಲ.
ಜುಲೈ 25ರಂದು ನಗರದಲ್ಲಿ ಬೇಕರಿ, ಕಾಂಡಿಮೆಂಟ್ಸ್ ಅಂಗಡಿಗಳನ್ನು ಬಂದ್ ಮಾಡಲಾಗುವುದು.
ಇಂದಿನಿಂದ ಕಪ್ಪುಪಟ್ಟಿ ಧರಿಸಿ ವ್ಯಾಪಾರ ಮಾಡಲು ನಿರ್ಧರಿಸಲಾಗಿದೆ
ಹಾಲು ಉತ್ಪನ್ನಗಳ ಮಾರಾಟ ನಿಷೇಧಿಸಿ ಹೋರಾಟ ಕೈಗೊಂಡಿಂದ್ದು, ಹಾಲು ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜುಲೈ 25ರಂದು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಣ್ಣ ವ್ಯಾಪಾರಿಗಳು ನಿರ್ಧಾರ ಕೈಗೊಂಡಿದ್ದಾರೆ.