BIG NEWS: ಆಸ್ಪತ್ರೆ ಉದ್ಘಾಟನೆ ವೇಳೆ ಸಂಸದ-ಸಚಿವರ ನಡುವೆ ಮಾತಿನ ಚಕಮಕಿ; ಏನ್ರಿ ನಮಗೂ ಪ್ರೋಟೋಕಾಲ್ ಇಲ್ವಾ, ಅಷ್ಟೂ ಗೊತ್ತಾಗಲ್ವಾ ಎಂದು ಗರಂ ಆದ ಡಿ.ಕೆ.ಸುರೇಶ್

ರಾಮನಗರ: ಆಸ್ಪತ್ರೆ ಉದ್ಘಾಟನೆ ವೇಳೆ ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ನಡುವೆ ಮಾತಿನ ಸಮರ ನಡೆದಿದ್ದು, ಇಬ್ಬರ ನಡುವೆ ಜಟಾಪಟಿಗೆ ಕಾರಣವಾಗಿದೆ.

ನನಗೂ ಪ್ರೋಟೋಕಾಲ್ ಇದೆ. ನಿವಿಬ್ರೂ ಸಚಿವರಾಗಿ ಅಷ್ಟು ಗೊತ್ತಾಗೋದಿಲ್ವಾ ಎಂದು ಸಂಸದ ಡಿ.ಕೆ.ಸುರೇಶ್, ಸಚಿವರಾದ ಅಶ್ವತ್ಥನಾರಾಯಣ, ಡಾ.ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಜಗಳವಾಡೋದು ಬೇಡ, ನಿಮಗೆ ಬರೋದು ಬೇಡ ಎಂದು ಹೇಳಿಲ್ಲ ಎಂದು ಅಶ್ವತ್ಥನಾರಾಯಣ ಹೇಳುತ್ತಿದ್ದಂತೆ ಇನ್ನಷ್ಟು ಗರಂ ಆದ ಡಿ.ಕೆ.ಸುರೇಶ್, ಇದು ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರದ ಕಾರ್ಯಕ್ರಮ, ಯಾರ್ರೀ ಅದು ಸಿಇಓ, ಡಿಸಿ? ಅಷ್ಟೂ ಗೊತ್ತಾಗಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಈಗ ಕಾರ್ಯಕ್ರಮಕ್ಕೆ ಬಂದಿದ್ದೀರಲ್ಲ ಬನ್ನಿ ಮಾತನಾಡೋಣ. ಆಸ್ಪತ್ರೆ ಉದ್ಘಾಟನೆ ಮಾಡೋಣ ಎಂದು ಸಚಿವ ಅಶ್ವತ್ಥನಾರಾಯಣ, ಸಂಸದರನ್ನು ಸಮಾಧಾನ ಪಡಿಸಿದ ಘಟನೆಯೂ ನಡೆದಿದೆ.

ಒಟ್ಟಾರೆ ರಾಮನಗರದ ಆಸ್ಪತ್ರೆ ಉದ್ಘಾಟನೆ ಆರಂಭದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಫೈಟ್ ಬಳಿಕ ಕಾಂಗ್ರೆಸ್ ಸಂಸದ ಹಾಗೂ ಬಿಜೆಪಿ ಸಚಿವರ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ನೆರದ ಜನ ದಂಗಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read