ಬೆಂಗಳೂರು: ರಸ್ತೆ ಗುಂಡಿ, ಚರಂಡಿ ಅಭಿವೃದ್ಧಿಯಂತ ಸಣ್ಣಪುಟ್ಟ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಗಮನ ಕೊಡಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೆಳಿಕೆಗೆ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್, ಅಭಿವೃದ್ಧಿ ಎಂಬುದು ಸಣ್ಣ ವಿಚಾರವೇ? ಎಂದು ಪ್ರಶ್ನಿಸಿದೆ.
ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ “ಮುಖ್ಯಮಂತ್ರಿ ನಗರೋತ್ಥಾನ ಯೋಜನೆ” ಮಾಡುತ್ತೇವೆ ಎಂದಿತ್ತು ರಾಜ್ಯ ಬಿಜೆಪಿ ಸರ್ಕಾರ, ಆದರೆ ರಾಜ್ಯಕ್ಕೆ ನಯಾಪೈಸೆ ಅಭಿವೃದ್ಧಿ ಕೊಡುಗೆ ನೀಡದ ಬಿಜೆಪಿಗೆ ಇಂದು ಅಭಿವೃದ್ಧಿ ಎಂಬುದು ಸಣ್ಣ ವಿಷಯವಾಗಿದೆ, ಅದರ ಬಗ್ಗೆ ಮಾತೇ ಆಡಬೇಡಿ ಎನ್ನುತ್ತಿದೆ. ಇದು ಬಿಜೆಪಿಯ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದೆ.
“ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ” ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ ರಾಜ್ಯ ಬಿಜೆಪಿ ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಲವ್ ಜಿಹಾದ್ ಬಿಡಿ, ಮೊದಲು ಡಾಲರ್ ಬಗ್ಗೆ ಮಾತಾಡಿ ಮಾನ್ಯ ನಳೀನ್ ಕಟೀಲ್ ಅವರೇ. “ಡಾಲರ್ & ರೂಪಾಯಿ” ಬಗ್ಗೆ ಮಾತಾಡಲು ಏಕೆ ಹಿಂಜರಿಕೆ ತಮಗೆ? ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ? ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.
ಅಭಿವೃದ್ಧಿ,
ನಿರುದ್ಯೋಗ,
ಆರ್ಥಿಕ ಸಂಕಷ್ಟ,
ಬೆಲೆ ಏರಿಕೆ,
ರಸ್ತೆ ಗುಂಡಿಯ ಸಾವುಗಳು,
ರೈತರ ಆತ್ಮಹತ್ಯೆ,
ಭ್ರಷ್ಟಾಚಾರ,
ನೇಮಕಾತಿ ಹಗರಣಗಳು,
ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳು!
ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿದರೂ ಉದ್ಯೋಗ ಕೇಳಬೇಡಿ ‘ಲವ್ ಜಿಹಾದ್’ ಎಂಬ ಇಲ್ಲದ ವಿಷಯವನ್ನು ದೊಡ್ಡದಾಗಿಸಿ!
ಇದು ಬಿಜೆಪಿಯ ಲಜ್ಜೆಗೇಡಿತನದ ಪರಮಾವಧಿ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
https://twitter.com/INCKarnataka/status/1610520376597180416
https://twitter.com/INCKarnataka/status/1610514405569224704
https://twitter.com/INCKarnataka/status/1610510179707256835
https://twitter.com/INCKarnataka/status/1610503785637642240