BIG NEWS: ಅಕ್ರಮ ಮಾರಾಟಕ್ಕೆ ಹವಣಿಕೆ; ಬರೋಬ್ಬರಿ 18 ಕೋಟಿ ರೂ. ಮೌಲ್ಯದ ‘ಅಂಬರ್ ಗ್ರೀಸ್’ ವಶ

ವಿದೇಶಗಳಲ್ಲಿ ಅಂಬರ್ ಗ್ರೀಸ್ ಗೆ (ತಿಮಿಂಗಲದ ವಾಂತಿ) ಬಹುದೊಡ್ಡ ಬೇಡಿಕೆ ಇದೆ. ಇದನ್ನು ಸುಗಂಧ ದ್ರವ್ಯ, ಔಷಧ ತಯಾರಿಕೆಗಳಲ್ಲಿ ಬಳಸಲಾಗುತ್ತಿದ್ದು, ಕೋಟಿಗಟ್ಟಲೆ ಬೆಲೆ ಬಾಳುವ ಇದನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ.

ಹೀಗೆ ಅಕ್ರಮವಾಗಿ ಮಾರಾಟ ಮಾಡಲು ಕೇರಳದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ 9 ಕೆಜಿ 821 ಗ್ರಾಂ ಅಂಬರ್ ಗ್ರೀಸ್ ಅನ್ನು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೇ 20 ಕೇರಳದಿಂದ ಬಂದಿದ್ದ ಮೂವರು ಆರೋಪಿಗಳು ಎಚ್‍ ಡಿ ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ಇರುವ ಹೋಟೆಲ್ ನಲ್ಲಿ ಊಟ ಮಾಡುವ ವೇಳೆ ಅಂಬರ್ ಗ್ರೀಸ್ ಮಾರಾಟದ ಕುರಿತು ಚರ್ಚೆ ನಡೆಸುತ್ತಿದ್ದರು. ಇದರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಅಂಬರ್ ಗ್ರೀಸ್ ವಶಪಡಿಸಿಕೊಳ್ಳುವುದರ ಜೊತೆಗೆ ಮೂವರನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read