BIG BREAKING : ಮೀಜೋರಾಂ ವಿಧಾನಸಭೆ ಚುನಾವಣೆ : ಹಾಲಿ ಸಿಎಂ ಝೋರಾಂಥಂಗಾ, ಡಿಸಿಎಂ ತೌನ್ಲುಯಾಗೆ ಸೋಲು

ಐಜ್ವಾಲ್: ಐಜ್ವಾಲ್ ಪೂರ್ವ-1 ರಲ್ಲಿ ಸಿಎಂ ಝೋರಾಂಥಂಗಾ ಅವರು ಝಡ್ಪಿಎಂನ ಲಾಲ್ ತನ್ಸಂಗ ಅವರ ವಿರುದ್ಧ ಸೋಲನುಭವಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಐಜ್ವಾಲ್ ಪೂರ್ವ-1 ರ ಎಂಎನ್ಎಫ್ ಅಭ್ಯರ್ಥಿ ಮತ್ತು ಹಾಲಿ ಸಿಎಂ ಝೋರಾಮ್ತಂಗಾ ಅವರು ಝೋರಾಂ ಪೀಪಲ್ಸ್ ಮೂವ್ಮೆಂಟ್ ಅಭ್ಯರ್ಥಿ ಲಾಲ್ ತನ್ಸಂಗಾ ವಿರುದ್ಧ 2000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ.

ಮಿಜೋರಾಂ ಉಪಮುಖ್ಯಮಂತ್ರಿ ಮತ್ತು ಎಂಎನ್‍ಎಫ್ ಅಭ್ಯರ್ಥಿ ತೌನ್ಲುಯಾ ಅವರು ಝಡ್‍ಪಿಎಂ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‍ಎಫ್)ನ ತೌಲುಯಾ 6,079 ಮತಗಳನ್ನು ಪಡೆದರೆ, ಜೋರಾಮ್ ಪೀಪಲ್ಸ ಮೂವ್‍ಮೆಂಟ್ (ಝಡ್‍ಪಿಎಂ) ಅಭ್ಯರ್ಥಿ ಡಬ್ಲ್ಯೂ ಚುವಾನವ್ಮಾ 6,988 ಮತಗಳನ್ನು ಪಡೆದರು.

ಆರೋಗ್ಯ ಸಚಿವ ಆರ್ ಲಾಲ್ಥಾಂಗ್ಲಿಯಾನಾ ಕೂಡ ದಕ್ಷಿಣ ತುಯಿಪುಯಿ ಕ್ಷೇತ್ರದಲ್ಲಿ ಹಿಂದುಳಿದಿದ್ದರೆ, ಝಡ್ಪಿಎಂ ಅಭ್ಯರ್ಥಿ ಜೆಜೆ ಲಾಲ್ಪೆಖ್ಲುವಾ ಮುನ್ನಡೆ ಸಾಧಿಸಿದ್ದಾರೆ. ಝಡ್ಪಿಎಂನ ಸಿಎಂ ಅಭ್ಯರ್ಥಿ ಲಾಲ್ದುಹೋಮಾ ಸೆರ್ಚಿಪ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಝಡ್ಪಿಎಂ ಎರಡು ಸ್ಥಾನಗಳನ್ನು ಗಳಿಸಿದೆ ಮತ್ತು 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read