BIG BREAKING : ಖರ್ಗೆ, ಖಂಡ್ರೆ ಕುರಿತು ಅವಹೇಳನಕಾರಿ ಹೇಳಿಕೆ : ಆರಗ ಜ್ಞಾನೇಂದ್ರ ವಿರುದ್ಧ `ಜಾತಿ ನಿಂದನೆ’ ಅಡಿ ದೂರು ದಾಖಲು

ಶಿವಮೊಗ್ಗ : : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕುರಿತು ಅವಹೇಳನಕಾರಿ ಹೇಳಿಕೆ ಸಂಬಂಧ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದಲಿತ ಮುಖಂಡ ಹರ್ಷೇಂದ್ರ ಕುಮಾರ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಅಡಿ ದೂರು ದಾಖಲಿಸಿದ್ದಾರೆ.

ಉತ್ತರ ಕರ್ನಾಟಕದ ಜನರ ಬಗ್ಗೆ, ಖರ್ಗೆ ಮತ್ತು ಖಂಡ್ರೆ ಅವರ ಮೈಬಣ್ಣ ಹಂಗಿಸುವ ರೀತಿಯಲ್ಲಿ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅರಗ ಜ್ಞಾನೇಂದ್ರ ಅರಣ್ಯದ ಬಗ್ಗೆ ಮಾಹಿತಿ ಇಲ್ಲದ ಉತ್ತರ ಕರ್ನಾಟಕದವರು ಗೃಹ ಸಚಿವರಾಗುತ್ತಿರುವುದು ನಮ್ಮ ದುರ್ದೈವ. ಮರ-ಗಿಡ ಏನೆಂದು ಅವರಿಗೆ ಗೊತ್ತಿಲ್ಲ. ಸುಟ್ಟು ಕರಕಲಾಗಿರುವ ಮನುಷ್ಯರ ಮುಖ ನೋಡಿದರೆ ಗೊತ್ತಾಗುತ್ತದೆ. ಅವರಿಗೆ ತಲೆ ಕೂದಲು ಇರುವುದರಿಂದ ಸ್ವಲ್ಪ ಪರವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಆರಗ ಜ್ಞಾನೇಂದ್ರ ಅವರ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಣ್ಣದ ಆಧಾರದಲ್ಲಿ ಅವಮಾನ ಮಾಡಿರುವ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಪಕ್ಷದ ಮನುವಾದದಲ್ಲಿನ ವರ್ಣಾಶ್ರಮದ ಬಗೆಗಿನ ಪ್ರೀತಿ ಮತ್ತು ದಮನಿತರ ವಿರುದ್ಧದ ಮನಸ್ಥಿತಿಯನ್ನು ಜ್ಞಾನೇಂದ್ರ ತೆರೆದಿಟ್ಟಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read