BIG BREAKING: ಈಶ್ವರಪ್ಪ ಪುತ್ರನಿಗೆ ತಪ್ಪಿದ ಶಿವಮೊಗ್ಗ ಬಿಜೆಪಿ ಟಿಕೆಟ್; ಚನ್ನಬಸಪ್ಪಗೆ ಅವಕಾಶ ಕೊಟ್ಟ ಹೈಕಮಾಂಡ್

ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ಚನ್ನಬಸಪ್ಪನವರಿಗೆ ಲಭಿಸಿದೆ. ಚುನಾವಣಾ ನಿವೃತ್ತಿ ಘೋಷಿಸಿದ್ದ ಮಾಜಿ ಸಚಿವ ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ತಮಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಚುನಾವಣಾ ನಿವೃತ್ತಿ ಘೋಷಿಸುವ ಹಿಂದಿನ ದಿನದವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಈಶ್ವರಪ್ಪನವರಿಗೆ ಹೈಕಮಾಂಡ್ ನಿಂದ ಬಂದ ಸಂದೇಶದಿಂದಾಗಿ ತೀವ್ರ ನಿರಾಸೆಯಾಗಿತ್ತು. ಆದರೂ ಕೂಡ ಅದಕ್ಕೆ ಮನ್ನಣೆ ನೀಡಿ ಅವರು ಚುನಾವಣಾ ನಿವೃತ್ತಿ ಘೋಷಿಸಿದ್ದರು.

ಆ ಬಳಿಕ ಪುತ್ರ ಕೆ.ಇ. ಕಾಂತೇಶ್ ಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಪ್ರಯತ್ನ ನಡೆಸಿದ್ದರು. ಇದರ ಮಧ್ಯೆ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕಾರಣ ಹೈಕಮಾಂಡ್ ಮಾತಿಗೆ ಮನ್ನಣೆ ನೀಡಿದ್ದ ಈಶ್ವರಪ್ಪನವರು ಹೇಳುವ ಅಭ್ಯರ್ಥಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಬಹುದೆಂದು ಹೇಳಲಾಗಿತ್ತು.

ಇದೆಲ್ಲದರ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಿಂಗಾಯತ ಸಮುದಾಯದ ಯೋಗೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರ ಜೊತೆಗೆ ಇದೇ ಸಮುದಾಯಕ್ಕೆ ಸೇರಿದ ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಆ ಪಕ್ಷದ ಅಭ್ಯರ್ಥಿಯಾಗಿದ್ದರು. ಹೀಗಾಗಿ ಎಲ್ಲ ಲೆಕ್ಕಚಾರಗಳನ್ನು ಹಾಕಿ ಈಶ್ವರಪ್ಪನವರ ಜೊತೆಗೂ ಚರ್ಚಿಸಿ ಬಿ.ಎಲ್.‌ ಸಂತೋಷ್‌ ಆಪ್ತರಾದ ಚನ್ನಬಸಪ್ಪನವರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read