BIG NEWS: ಈಜುಕೊಳದಲ್ಲಿ ದುರಂತ: ಸ್ವಿಮ್ಮಿಂಗ್ ಮಾಡುತ್ತಾ ಪಲ್ಟಿ ಹೊಡೆಯುವಾಗ ತಲೆಗೆ ಪೆಟ್ಟಾಗಿ ಯುವಕ ಸಾವು

ಬೀದರ್: ಸ್ನೇಹಿತನೊಂದಿಗೆ ಈಜುಕೊಳದಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ನ ನರಸಿಂಹ ಝರಣಿ ದೇವಸ್ಥಾನದ ಬಳಿ ಇರುವ ಖಾಸಗಿ ಈಜುಕೊಳದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಸೈಯದ್ ಅಫಾನ್ ಮೃತ ಯುವಕ. ಈಜುವ ವೇಳೆ ಪಲ್ಟಿ ಹೊಡೆಯಲು ಹೋಗಿ ಯುವಕನ ತಲೆಯ ಹಿಂಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ.

ಈಜುಕೊಳದ ಮಾಲಿಕ ವಿರುದ್ಧ ಯುವಕನ ಕುಟುಂಬದವರು ಆರೋಪ ಮಾಡಿದ್ದು, ಮಾಲೀಕ ಡಾ.ವೈಜಿನಾಥ್ ಮದನಾ ಅವರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದಿದ್ದಾರೆ. ಈಜುಕೊಳದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೀದರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read