ಭೋಪಾಲ್: ಮಡದಿ ಮತ್ತು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಿಎಸ್‌ಐ

ಮಡದಿ ಹಾಗೂ ಮಗಳನ್ನು ಕೊಂದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರು ಚಲಿಸುತ್ತಿರುವ ರೈಲಿಗೆ ಅಡ್ಡ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದ ಭೋಪಾಲದಲ್ಲಿ ಜರುಗಿದೆ.

ಇಲ್ಲಿನ ಪಿಎಚ್‌ಕ್ಯೂ ವಿಶೇಷ ಬ್ರಾಂಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌ಐ ಸುರೇಶ್ ಟೈಡೆ, ತಮ್ಮ ಮಡದಿ ಮೇಲೆ ಶಂಕೆ ಇಟ್ಟುಕೊಂಡಿದ್ದರಿಂದ ಹೀಗೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇಲ್ಲಿನ ಕೋಲಾರ್‌ ಪ್ರದೇಶದ ಲಲಿತಾ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸುರೇಶ್‌ರ ಮನೆಯಲ್ಲಿ ಈ ದುರಂತ ಜರುಗಿದೆ.

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸುರೇಶ್‌ ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಅವರ ಮಡದಿಯ ಸಂಬಂಧಿಕರು ತಿಳಿಸಿದ್ದಾರೆ. 2018ರಲ್ಲಿ ಮದುವೆಯಾದ ಸುರೇಶ್‌ ಅಂದಿನಿಂದ ಭೋಪಾಲದಲ್ಲಿ ವಾಸವಿದ್ದಾರೆ.

ತನ್ನಿಬ್ಬರು ಹೆಣ್ಣುಮಕ್ಕಳ ಜೊತೆಗೆ ಮಡದಿಯನ್ನೂ ಕೊಂದ ಸುರೇಶ್, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಬೆನ್ನತ್ತಿದ ಪೊಲೀಸರು ಆತನ ಇಹಪರಗಳನ್ನು ಶೋಧಿಸಿದ ಸಂದರ್ಭದಲ್ಲಿ ವಿಳಾಸ ಹಾಗೂ ಇತರ ವಿವಿರಗಳು ಸಿಕ್ಕಿವೆ.

ಮೃತನ ಮನೆಯನ್ನು ತಲುಪಿದ ಪೊಲೀಸರಿಗೆ ಅಲ್ಲಿ ಆತನ ಮಡದಿ ಹಾಗೂ ಪುತ್ರಿಯರ ಮೃತ ದೇಹಗಳು ಸಿಕ್ಕಿವೆ. ದೇಹಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವನ್ನೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read