ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆ ಜೊತೆ ಅನುಚಿತ ವರ್ತನೆ; ಶಾಕಿಂಗ್ ‘ವಿಡಿಯೋ ವೈರಲ್’

ಜಹಾಂಗೀರಾಬಾದ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಐಸ್‌ ಕ್ರೀಂ ಮಾರಾಟ ಮಾಡ್ತಿದ್ದ ವ್ಯಕ್ತಿ ನಂತ್ರ ವಿಡಿಯೋ ಮಾಡಿದ್ದ ವ್ಯಕ್ತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಿ, ಅದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್‌ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ ಪೋಸ್ಟ್‌ ಮಾಡಿದ್ದ ವ್ಯಕ್ತಿ, ಅಪ್ರಾಪ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದ.  ಪೋಕ್ಸೊ ಕಾಯ್ದೆಯಡಿ ಇದು ಅಪರಾಧ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ಆರೋಪಿಯನ್ನು ರಮೇಶ್ ಸಾಹು ಎಂದು ಗುರುತಿಸಲಾಗಿದೆ.  ರಮೇಶ್‌ ಸಾಹು, ಮನೆಯ ಸಮೀಪವೇ ಈ ಘಟನೆ ನಡೆದಿದೆ. ಐಸ್ ಕ್ರೀಮ್ ಮಾರಾಟಗಾರ ಬಾಲಕಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದ ಆತ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಘಟನೆಯನ್ನು ದಾಖಲಿಸಿಕೊಂಡಿದ್ದಾನೆ. ಆತನ ಸ್ಮಾರ್ಟ್‌ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಮೇಶ್ ಅವರ ಮನೆಯಿಂದ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಎಸ್‌ಎಚ್‌ಒ ಸೋನಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಐಸ್ ಕ್ರೀಮ್ ಮಾರಾಟಗಾರನೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದು, ಆ ವ್ಯಕ್ತಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ.

ಎರಡು ದಿನಗಳ ನಂತರ ಹುಡುಗಿ ಮನೆಯವರಿಗೆ ಈ ವಿಡಿಯೋ ತಲುಪಿತ್ತು. ಹುಡುಗಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ನಂತ್ರ ಜಹಾಂಗೀರಾಬಾದ್ ಪೊಲೀಸರು ಕಲ್ಪಿಯ ಐಸ್ ಕ್ರೀಮ್ ಮಾರಾಟಗಾರನನ್ನು ಬಂಧಿಸಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read