ಪ್ರಸಿದ್ಧ ಭೋಜಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕಾರ್ಯವೈಖರಿಯನ್ನು ಹಾಡಿನ ಮೂಲಕ ಪ್ರಶ್ನಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ತೆರವು ಕಾರ್ಯಾಚರಣೆ ವೇಳೆ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ 45 ವರ್ಷದ ತಾಯಿ ಹಾಗೂ ಆಕೆಯ 20 ವರ್ಷದ ಪುತ್ರಿ ಮೃತಪಟ್ಟಿದ್ದು ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ನೇಹಾ ಸಿಂಗ್ ರಾಥೋಡ್ ‘ಯುಪಿ ಮೆ ಕಾಬ’ ಎಂಬ ಹಾಡನ್ನು ಹಾಡಿದ್ದಾರೆ.
ಇದು ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದು, ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ನೇಹಾ ಸಿಂಗ್ ರಾಥೋಡ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಕುರಿತಂತೆ ಸೂಕ್ತ ವಿವರಣೆ ನೀಡಲು ಪೊಲೀಸರು ಸೂಚಿಸಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
https://twitter.com/nehafolksinger/status/1626209442420379654?ref_src=twsrc%5Etfw%7Ctwcamp%5Etweetembed%7Ctwterm%5E1626209442420379654%7Ctwgr%5E87a3dc70a0aef97d61015d5182355e44e0b5bf64%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fregional-film-news%2Fbhojpuri-singer-neha-singh-rathore-gets-legal-notice-for-viral-song-up-mein-ka-ba-cops-accuse-her-of-creating-disharmony-in-society
https://twitter.com/nehafolksinger/status/1628065269917839360?ref_src=twsrc%5Etfw%7Ctwcamp%5Etweetembed%7Ctwterm%5E1628065269917839360%7Ctwgr%5Ee7491efd9cbabfca4512d1b3d078c60ec1333f83%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fregional-film-news%2Fbhojpuri-singer-neha-singh-rathore-gets-legal-notice-for-viral-song-up-mein-ka-ba-cops-accuse-her-of-creating-disharmony-in-society