ವಾಟ್ಸಾಪ್ ಸ್ಟೇಟಸ್ ನಲ್ಲಿ ಸಾವಿನ ಸುಳಿವು ನೀಡಿ ಆತ್ಮಹತ್ಯೆಗೆ ಶರಣಾದ ನಟಿ….!

ಖ್ಯಾತ ಭೋಜ್ಪುರಿ ನಟಿ ಅಮೃತಾ ಪಾಂಡೆ ಬಿಹಾರದ ಬಾಗಲ್ಪುರದಲ್ಲಿನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಪತಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದ ಅವರು ಕುಟುಂಬ ಸದಸ್ಯರೊಬ್ಬರ ವಿವಾಹ ಸಮಾರಂಭಕ್ಕಾಗಿ ಊರಿಗೆ ಮರಳಿದ್ದರು ಎಂದು ತಿಳಿದು ಬಂದಿದೆ.

ತಮ್ಮ ಸೀರೆಯನ್ನು ಬಳಸಿಕೊಂಡು ನಟಿ ಅಮೃತಾ ಪಾಂಡೆ ನೇಣು ಹಾಕಿಕೊಂಡಿದ್ದು, ಎಷ್ಟೊತ್ತು ಆದರೂ ರೂಮಿನ ಬಾಗಿಲು ತೆಗೆಯದ ಕಾರಣ ಸಂಬಂಧಿಕರು ಪರಿಶೀಲಿಸಿದ ವೇಳೆ ಮೃತದೇಹ ಪತ್ತೆಯಾಗಿದೆ. ನಟಿ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ ಸಾಯುವ ಮುನ್ನ ನಟಿ ಅಮೃತಾ ಪಾಂಡೆ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ “ಅವರ ಜೀವನ ಎರಡು ದೋಣಿಗಳಲ್ಲಿದೆ. ಆದರೆ ನಾನು ನನ್ನ ದೋಣಿಯನ್ನು ಮುಳುಗಿಸುವ ಮೂಲಕ ಅವರ ಪ್ರಯಾಣವನ್ನು ಸರಾಗ ಮಾಡಿದ್ದೇನೆ” ಎಂದು ಹಾಕಿಕೊಂಡಿದ್ದು ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದರ ಮಧ್ಯೆ ನಟಿ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಆಪ್ತರು, ಆಕೆ ಕೆಲವು ದಿನಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಅಲ್ಲದೆ ಕೌಟುಂಬಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಬಳಿಕವಷ್ಟೇ ನಟಿ ಸಾವಿನ ಕುರಿತ ನಿಖರ ಕಾರಣ ತಿಳಿದು ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read