ಹಾಸನ: ಹಾಸನದಲ್ಲಿ ಭೀಮ ಆನೆ ಸೆರೆ ಕಾರ್ಯಾಚರಣೆ ವೇಳೆ ಆನೆಯ ರಂಪಾಟಕ್ಕೆ ದಂತ ಕಟ್ ಆಗಿರುವ ಘಟನೆ ನಡೆದಿದೆ.
ಹಾಸನದ ಜಗಬೋರನಹಳ್ಳಿಯಲ್ಲಿ ಕೆಲ ದಿನಗಳಿಂದ ಭೀಮ ಎಂಬ ಒಂಟಿ ಸಲಗ ಗ್ರಾಮದಲ್ಲಿ ಓಡಾಡುತ್ತಾ, ಸಿಕ್ಕ ಸಿಕ್ಕ ವಸ್ತುಗಳು, ಮನೆಗಳ ಮೇಲೆ ದಾಳಿ ನಡೆಸುತ್ತಾ ಹಾನಿಗೊಳಿಸುತ್ತಿದೆ. ಇದರಿಂದ ಭಯಭೀತರಾಗಿರುವ ಗ್ರಾಮಸ್ಥರು ಆನೆ ಸೆರೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಭೀಮಾ ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಆದರೆ ಭೀಮ ಆನೆ ಮಾತ್ರ ಯಾರ ಕೈಗೂ ಸಿಗದೇ ಗ್ರಾಮದ ತುಂಬೆಲ್ಲ ಓಡಾಡುತ್ತ ಉಪಟಳ ನೀಡುತ್ತಿದೆ. ಮತ್ತೊಂದೆಡೆ ಭೀಮ ಆನೆ ಸೆರೆ ಹಿಡಿಯಲು ಕ್ಯಾಪ್ಟನ್ ಆನೆಯನ್ನು ಬಳಸಿಕೊಳ್ಳಲಾಗಿದೆ. ಎರಡೂ ಮದಗಜಗಳ ನಡುವೆ ಕಾಅದಾಟ ನಡೆದಿದೆ. ಈ ವೇಳೆ ಭೀಮ ಆನೆಯ ಬಲಭಾಗದ ದಂತ ಮುರಿದಿದೆ.
ದಂತ ಮುರಿದು ರಕ್ತ ಸೋರುತ್ತಾ ನರಳಾಡುತ್ತಿದ್ದರೂ ಭೀಮ ಆನೆ ಗ್ರಾಮದಲ್ಲಿ ಓಡಾಡುತ್ತ ಉಪಟಳ ಮುಂದುವರೆಸಿದೆ. ಆನೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
