ಬೆಂಗಳೂರು: ನಟಿ ಭಾವನಾ ರಾಮಣ್ಣ ಅವರಿಗೆ ಜನಿಸಿದ್ದ ಅವಳಿ ಮಕ್ಕಳಲ್ಲಿ ಓರ್ವ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ವೈದ್ಯರ ಸಲಹೆಯಂತೆ ನಟಿ ಭಾವನಾ ರಾಮಣ್ಣ 8 ದಿನಗಳ ಹಿಂದೆ ಹೆರಿಗೆಯಾಗಿದ್ದರು. ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಭಾವನಾ 7ನೇ ತಿಂಗಳ ಗರ್ಭಣಿಯಾಗಿದ್ದಾಗ ಹೊಟ್ಟೆಯಲ್ಲಿದ್ದ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಆರೋಗ್ಯ ಸಮಸ್ಯೆಯಿದೆ ಎಂದು ವೈದ್ಯರು ತಿಳಿಸಿದ್ದರು. ಮಕ್ಕಳ ಹಾಗೂ ತಾಯಿ ಆರೋಗ್ಯದ ದೃಷ್ಟಿಯಿಂದಾಗಿ 8ನೇ ತಿಂಗಳಿಗೆ ಹೆರಿಗೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ 8 ದಿನಗಳ ಹಿಂದಷ್ಟೇ ಭಾವನಾ ಅವಳಿ ಮಕ್ಕಳಿಗೆ ಜನ್ಮನೀಡಿದ್ದರು. 8 ನೇ ತಿಂಗಳಲ್ಲೇ ಭಾವನಾ ಹೆರಿಗೆಯಾಗಿದ್ದರು. ತಾಯಿ ಹಾಗೂ ಮಕ್ಕಳಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಆರೋಗ್ಯ ಸಮಸ್ಯೆಯಿದ್ದ ಓರ್ವ ಹೆಣ್ಣುಮಗು ಸಾವನ್ನಪ್ಪಿದೆ. ಇನ್ನೋರ್ವ ಮಗು ಆರೋಗ್ಯವಾಗಿ, ಕ್ಷೇಮವಾಗಿರುವುದಾಗಿ ತಿಳಿದುಬಂದಿದೆ.
ನಟಿ ಭಾವನಾ ರಾಮಣ್ಣ ವಿವಾಹವಾಗದೆಯೇ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದರು. ತಾವು ಶೀಘ್ರದಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದರು. ಇತ್ತೀಚೆಗಷ್ಟೇ ಸೀಮಂತ ಶಾಸ್ತ್ರ ಕೂಡ ನೆರವೇರಿತ್ತು. ಈ ಸಂಭ್ರಮದ ಕ್ಷಣಗಳ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಆದರೆ ಈಗ ಭಾವನಾ 8ನೇ ತಿಂಗಳಿಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳಲ್ಲಿ ಓರ್ವ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.