ತನ್ನ ಟೈಟಲ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ ತೇಜಸ್ ಕಿರಣ್ ಹಾಗೂ ಮಯೂರ್ ಅಂಬೆ ಕಲ್ಲು ಜಂಟಿಯಾಗಿ ನಿರ್ದೇಶಿಸಿರುವ ‘ಭಾವ ತೀರ ಯಾನ’ ಚಿತ್ರ ಮುಂದಿನ ತಿಂಗಳು ಫೆಬ್ರವರಿ 21ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಆರೋಹ ಫಿಲಂ ಬ್ಯಾನರ್ ನಲ್ಲಿ ಶೈಲೇಶ್ ಅಂಬೆಕಲ್ಲು, ಲಕ್ಷ್ಮಣ್ ಬಿ.ಕೆ. ನಿರ್ಮಾಣ ಮಾಡಿದ್ದು, ರಮೇಶ್ ಭಟ್ ಸೇರಿದಂತೆ ವಿದ್ಯಾ ಮೂರ್ತಿ, ತೇಜಸ್ ಕಿರಣ್, ಅರೋಹಿ ನೈನ, ಅನುಷಾ ಕೃಷ್ಣ, ಚಂದನ ಅನಂತ ಕೃಷ್ಣ ಹಾಗೂ ಸಂದೀಪ್ ರಾಜಗೋಪಾಲ್ ತೆರೆ ಹಂಚಿಕೊಂಡಿದ್ದಾರೆ.
ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ನೀಡಿದ್ದು, ವಿಶಾಕ್ ನಾಗಲಪುರ ಸಂಭಾಷಣೆ, ಸುಪ್ರೀತ್ ಜಿ.ಕೆ. ಸಂಕಲನ, ಶಿವಶಂಕರ ನೂರಂಬಡ ಛಾಯಾಗ್ರಾಹಣವಿದೆ.