ʼಗ್ರೀನ್ ಟೀʼ ಅತಿಯಾಗಿ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತೆ ಎಚ್ಚರ…..!

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಸೇವಿಸುವುದರ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಮಾತ್ರ ದೇಹಕ್ಕೆ ಅನೇಕ ರೀತಿಯ ಹಾನಿಯನ್ನುಂಟು ಮಾಡುತ್ತದೆ.

*ಗ್ರೀನ್ ಟೀಯಲ್ಲಿ ಕೆಫೀನ್ ಅಂಶ ಕಡಿಮೆ ಇದ್ದರೂ ಇದನ್ನು ದಿನವಿಡೀ ಸೇವಿಸಿದರೆ ಹೊಟ್ಟೆಯ ತೊಂದರೆಗಳು, ನಿದ್ರಾಹೀನತೆ, ವಾಂತಿ, ಅತಿಸಾರ, ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.

*ಗ್ರೀನ್ ಟೀಯನ್ನು ಅತಿಯಾಗಿ ಸೇವಿಸಿದರೆ ಇದರಲ್ಲಿರುವ ಅಂಶ ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ.

*ಗರ್ಭಿಣಿಯರು ಗ್ರೀನ್ ಟೀಯನ್ನು ಸೇವಿಸಿದರೆ ಗರ್ಭಪಾತವಾಗುವ ಸಂಭವವಿದೆ. ಅಥವಾ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

*ಗ್ರೀನ್ ಟೀಯನ್ನು ಅತಿಯಾಗಿ ಸೇವಿಸಿದರೆ ಹಸಿವು ಕಡಿಮೆಯಾಗಿ ಆಹಾರ ಸೇವಿಸದೆ ದೇಹವು ಪೋಷಕಾಂಶಗಳ ಕೊರತೆಯಿಂದ ದುರ್ಬಲವಾಗುತ್ತದೆ.

*ಗ್ರೀನ್ ಟೀಯನ್ನು ಅತಿಯಾಗಿ ಸೇವಿಸಿದರೆ ಇದರಲ್ಲಿರುವ ಆಮ್ಲ ಮೂತ್ರಪಿಂಡದಲ್ಲಿ ಕಲ್ಲು ಉತ್ಪತ್ತಿ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read