ಶಿವಮೊಗ್ಗ : ಆ. 12 ರಂದು ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಮತ್ತು ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಬಸ್ಸ್ ನಿಲ್ದಾಣ ಮತ್ತು ಬಿ.ಹೆಚ್‌ರಸ್ತೆಯ ವಾಣಿಜ್ಯ ಅಂಗಡಿಗಳಿಗೆ, ಹೊಟೇಲ್, ಆಟೋ ಮಾಲೀಕರಿಗೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೇಮಿಸಿಕೊಂಡ ಮಾಲೀಕರ ವಿರುದ್ಧ ರೂ.20,000/- ರಿಂದ ರೂ.50,000/-ಗಳವರೆಗೆ ದಂಡವನ್ನು ಅಥವಾ 6 ತಿಂಗಳಿನಿAದ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು.
ನಂತರ ಬೀದಿ ಬದಿ ಪೋಷಕರು ಇಲ್ಲದ ಮಕ್ಕಳು ಕಂಡುಬAದರೆ 1098 ಮಕ್ಕಳ ಸಹಾಯವಾಣಿಗೆ ಮಾಹಿತಿಯನ್ನು ನೀಡಲು ಅರಿವು ಮೂಡಿಸಲಾಯಿತು.
ಈ ಅರಿವು ಕಾರ್ಯಕ್ರಮ ಮತ್ತು ತಪಾಸಣೆಯಲ್ಲಿ ಎಂ ಕೃಷ್ಣಕಾರ್ಮಿಕ ನಿರೀಕ್ಷಕರು ಶಿವಮೊಗ್ಗ, ರಘುನಾಥ ಎ.ಎಸ್. ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪುನೀತ್, ಭರತ್ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಮಧು, ದೀಪ್ತಿ ಹಾಜರಿದ್ದರು.