ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಕ್ರೆಡಿಟ್ ಕಾರ್ಡ್ ಸಾಲ ತಡವಾಗಿ ಪಾವತಿಸಿದರೆ ಎಷ್ಟು ಬೇಕಾದರೂ ಬಡ್ಡಿ ವಿಧಿಸಲು ಬ್ಯಾಂಕುಗಳಿಗೆ ಅವಕಾಶ

ನವದೆಹಲಿ: ಕ್ರೆಡಿಟ್ ಕಾರ್ಡ್ ಸಾಲವನ್ನು ವಿಳಂಬವಾಗಿ ಪಾವತಿಸುವವರಿಗೆ ವಾರ್ಷಿಕ ಗರಿಷ್ಟ ಶೇಕಡ 30ರಷ್ಟು ಬಡ್ಡಿ ವಿಧಿಸಬೇಕು ಎನ್ನುವ ಮಿತಿಯನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದೆ. ಇದರಿಂದಾಗಿ ಬಡ್ಡಿ ದರ ನಿರ್ಧರಿಸುವ ಸ್ವಾತಂತ್ರ್ಯ ಬ್ಯಾಂಕುಗಳಿಗೆ ಸಿಕ್ಕಂತಾಗಿದೆ.

ಕ್ರೆಡಿಟ್ ಕಾರ್ಡ್ ಸಾಲವನ್ನು ತಡವಾಗಿ ಪಾವತಿಸಿದಲ್ಲಿ ಎಷ್ಟು ಬೇಕಾದರೂ ದುಬಾರಿ ಬಡ್ಡಿ ವಿಧಿಸುವ ಅವಕಾಶ ಬ್ಯಾಂಕುಗಳಿಗೆ ಸಿಕ್ಕಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ತಡವಾದಾಗ ವಿಧಿಸುತ್ತಿದ್ದ ವಾರ್ಷಿಕ ಶೇಕಡ 30ರಷ್ಟು ಬಡ್ಡಿಯ ಗರಿಷ್ಠ ಮಿತಿಯನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿದ್ದು, ಈ ಮೂಲಕ ಬ್ಯಾಂಕುಗಳಿಗೆ ನಿಗದಿತ ಸಮಯ ಮೀರಿದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮೇಲೆ ಹೇರಲಾಗುವ ಬಡ್ಡಿದರ ನಿರ್ಧರಿಸುವ ಮತ್ತು ನಿಗದಿಪಡಿಸುವ ಸ್ವಾತಂತ್ರ್ಯ ದೊರೆತಿದೆ.

ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದ ಅಥವಾ ಮೊತ್ತಕ್ಕಿಂತ ಕಡಿಮೆ ಪಾವತಿಸುವವರ ಮೇಲೆ ವಾರ್ಷಿಕ ಗರಿಷ್ಠ ಶೇಕಡ 30ರಷ್ಟು ಬಡ್ಡಿ ಹಾಕಬೇಕು ಎಂದು 2008ರಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನಿರ್ಧರಿಸಿತ್ತು. ಇದನ್ನು ಬ್ಯಾಂಕುಗಳು ವಿರೋಧಿಸಿದ್ದವು.

ಸಾಲ ನೀಡುವ ಬ್ಯಾಂಕುಗಳು ತಡವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸುವ ಅಧಿಕಾರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಇದೆಯೇ ಎಂದು ಪ್ರಶ್ನಿಸಿ ಅನೇಕ ಬ್ಯಾಂಕುಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೇಲಾ ತ್ರಿವೇದಿ, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪೀಠ ಬಡ್ಡಿ ದರ ನಿಗದಿಪಡಿಸುವ ಅಧಿಕಾರವನ್ನು ಬ್ಯಾಂಕುಗಳಿಗೆ ನೀಡಿ ಪ್ರಕರಣಕ್ಕೆ ತೆರೆ ಎಳೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read