ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ

ಚರ್ಮದ ಕಾಂತಿ ಬಹಳ ಮುಖ್ಯ. ಚರ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಹಾರ ಹಾಗೂ ಆರೈಕೆ ಚರ್ಮದ ಸೌಂದರ್ಯವನ್ನು ಕಾಪಾಡಲು ನೆರವಾಗುತ್ತದೆ. ಚರ್ಮದ ಆರೈಕೆ ಸರಿಯಾಗಿ ಮಾಡದಿದ್ದಲ್ಲಿ, ಚರ್ಮ ರೋಗಗಳು, ಚರ್ಮದ ಸಮಸ್ಯೆಗಳು, ಸೋಂಕುಗಳು ಮತ್ತು ಅಲರ್ಜಿ ಕಾಡುತ್ತದೆ.

ಬೇವು ಮತ್ತು ಅಲೋವೆರಾ ಚರ್ಮದ ಆರೈಕೆಗೆ ಹೇಳಿ ಮಾಡಿಸಿದ ಔಷಧಿ. ಅನೇಕ ಸೋಂಕುಗಳು ಮತ್ತು ಅಲರ್ಜಿಗಳಿಂದ ಚರ್ಮವನ್ನು ಇದು ರಕ್ಷಿಸುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಅಲೋವೆರಾದ ಬಳಕೆ ಹೆಚ್ಚಾಗಿದೆ.

ಅಲೋವೆರಾ ಮತ್ತು ಬೇವು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಇದರ ಬಳಕೆ ಮಾಡಿದಲ್ಲಿ ಮೊಡವೆ ಮತ್ತು ಕಪ್ಪು ಕಲೆಗಳನ್ನು ತೊಡೆದು ಹಾಕಬಹುದು. ಅಲೋವೆರಾ ಮಾಯಿಶ್ಚರೈಸರ್ ತರಹ ಕೆಲಸ ಮಾಡುವುದರಿಂದ ಚರ್ಮದಲ್ಲಿನ ತೇವಾಂಶವನ್ನು ಉಳಿಸಿಕೊಳ್ಳಲು ಬಹಳ ಪರಿಣಾಮಕಾರಿ.

ಯಾವುದೇ ರೀತಿಯ ಸೋಂಕನ್ನು ಅಥವಾ ಚರ್ಮರೋಗಗಳಿಂದ  ರಕ್ಷಿಸಿಕೊಳ್ಳಲು  ಬೇವು ಬಹಳ ಪರಿಣಾಮಕಾರಿ ಮನೆಮದ್ದಾಗಿದೆ. ಆ್ಯಂಟಿಬಯೋಟಿಕ್  ಗುಣಗಳಿಂದಾಗಿ ಚರ್ಮವನ್ನು ಸ್ವಚ್ಛವಾಗಿಡಲು, ರೋಗರಹಿತ ಉತ್ತಮ ಹೊಳಪಾದ ಸ್ಕಿನ್ ಗಾಗಿ ಬೇವನ್ನು ಬಳಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read