BIG NEWS: ಬೆಂಗಳೂರಿನಲ್ಲಿ ಮತ್ತೊಂದು ದುರಂತ; ಕರೆಂಟ್ ಶಾಕ್ ಗೆ ತಾಯಿ-ಮಗಳು ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ವಿದ್ಯುತ್ ಪ್ರವಹಿಸಿ ತಾಯಿ ಹಾಗೂ ಮಗಳು ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ನಡೆದಿದೆ.

ಸೌಂದರ್ಯ ಹಾಗೂ ಮಗಳು ಲೀಲಾ ಮೃತ ತಾಯಿ-ಮಗಳು. ರಸ್ತೆ ಬದಿ ಕಟ್ ಆಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದು ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಕತ್ತಲಲ್ಲಿ ರಸ್ತೆ ಮೇಲೆ ಕಟ್ ಆಗಿ ಬಿದ್ದಿದ್ದ ಕರೆಂಟ್ ವೈರ್ ಕಾಣದೇ ವೈರ್ ಮೇಲೆಯೇ ಕಾಲಿಟ್ಟಿದ್ದಾರೆ. ಪರಿಣಾಮ ಏಕಾಏಕಿ ವಿದ್ಯುತ್ ಪ್ರವಹಿಸಿ ತಾಯಿ-ಮಗಳು ಇಬ್ಬರು ಸಾವನ್ನಪ್ಪಿದ್ದಾರೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read