BIG NEWS: ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರಿನಲ್ಲಿ 30 ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ; ಗೃಹ ಸಚಿವ ಪರಮೇಶ್ವರ್ ಮಾಹಿತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಬೆಂಗಳೂರಿನ ಹಲವೆಡೆಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಡ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಬೆಂಗಳೂರು ನಗರದ 30 ಕಡೆಗಳಲ್ಲಿ ಮಹಿಳೆಯರಿಗಾಗಿ ಸೇಫ್ಟಿ ಐಲ್ಯಾಂಡ್ ಜಾರಿಗೊಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಗೃಹ ಸಚಿವರು, ಸಾರ್ವಜನಿಕರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್ ಜಾರಿಗೆ ಬರಲಿದೆ ಎಂದರು. ನೀಲಿ ಬಣ್ಣದ ಟೆಲಿಫೋನ್ ಬೂತ್ ನಂತಹ ರಚನೆ ಹೊಂದಿರುವ ಸೇಫ್ಟಿ ಐಲ್ಯಾಂಡ್ ನಿರ್ಮಿಸಲಾಗುತ್ತಿದ್ದು, ಮಹಿಳೆಯರು ಯಾವುದಾದರೂ ಅಪಾಯದಲ್ಲಿ ಅಥವಾ ಸಂಕಷ್ಟದಲ್ಲಿ ಸಿಲುಕಿದ್ದರೆ ಅವರ ಮೊಬೈಲ್ ಫೋನ್ ಸಂಪರ್ಕ ಸಾಧ್ಯವಾಗದಿದ್ದರೆ ಅವರು ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಲು ಈ ಸೇಫ್ಟಿ ಐಲ್ಯಾಂಡ್ ಬಳಸಬಹುದು.

ಸೇಫ್ಟಿ ಐಲ್ಯಾಂಡ್ ಬಳಿ ಬಂದು ಎಸ್ ಒ ಎಸ್ ಬಟನ್ ಒತ್ತಬೇಕು. ಇದು ಸಮೀಪದ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ತಿಳಿಸುತ್ತದೆ. ಪೊಲೀಸ್ ಸಿಬ್ಬಂದಿಗಳು ಸಾಧ್ಯವಾದಷ್ಟು ವೇಗವಾಗಿ ಘಟನಾ ಸ್ಥಾಳಕ್ಕೆ ಆಗಮಿಸಲು ಸಹಾಯವಾಗುತ್ತದೆ. ತೊಂದರೆಗೊಳಗಾದ ವ್ಯಕ್ತಿ ಮೊಬೈಲ್ ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿಲ್ಲದಿದ್ದರೂ ಪೊಲೀಸರನ್ನು ತಲುಪುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read