ಶಸ್ತ್ರ ಚಿಕಿತ್ಸೆ ವೇಳೆ ದೇಹದಲ್ಲೇ ಸೂಜಿ ಬಿಟ್ಟ ವೈದ್ಯರು: 20 ವರ್ಷಗಳ ನಂತರ ಮಹಿಳೆಗೆ 5 ಲಕ್ಷ ರೂ. ಪರಿಹಾರ

ಬೆಂಗಳೂರು ಮೂಲದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸುಮಾರು 20 ವರ್ಷಗಳ ನಂತರ ಗ್ರಾಹಕರ ವೇದಿಕೆಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.

3.2 ಸೆಂಟಿಮೀಟರ್ ಸರ್ಜಿಕಲ್ ಸೂಜಿಯನ್ನು ಅವರ ದೇಹದಲ್ಲಿ ಬಿಡಲಾಗಿತ್ತು. ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಜಯನಗರ ನಿವಾಸಿ ಪದ್ಮಾವತಿ ಅವರಿಗೆ ದಾವೆ ವೆಚ್ಚವಾಗಿ 50,000 ರೂ.ಗಳನ್ನು ನೀಡುವಂತೆ ಆಸ್ಪತ್ರೆ ಮತ್ತು ಇಬ್ಬರು ವೈದ್ಯರಿಗೆ ಸೂಚಿಸಿದೆ.

ಆಸ್ಪತ್ರೆಯ ವೆಚ್ಚವನ್ನು ಒಳಗೊಂಡಿರುವ ಪಾಲಿಸಿಯನ್ನು ಬಿಡುಗಡೆ ಮಾಡಿದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕೋ ಲಿಮಿಟೆಡ್‌ಗೆ ವೃತ್ತಿಪರ ಮತ್ತು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಐದು ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ನಿರ್ದೇಶಿಸಿದೆ.

2004 ರ ಸೆಪ್ಟೆಂಬರ್ 29 ರಂದು 32 ವರ್ಷದ ಮಹಿಳೆಗೆ ದೀಪಕ್ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಹರ್ನಿಯಾ ಆಪರೇಷನ್ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಪೂರ್ಣಗೊಂಡ ನಂತರ, ಆಕೆಯ ಅಪೆಂಡಿಕ್ಸ್ ಅನ್ನು ಸಹ ತೆಗೆದುಹಾಕಲಾಯಿತು.

ಮರುದಿನ ಅವರು ತೀವ್ರವಾದ ನೋವಿನ ಬಗ್ಗೆ ವೈದ್ಯರಿಗೆ ತಿಳಿಸಿದಾಗ ಅವರು ಕೆಲವು ನೋವು ನಿವಾರಕ ನೀಡಿ ಇದು ಶಸ್ತ್ರಚಿಕಿತ್ಸೆಯ ನಂತರದ ಅಸ್ವಸ್ಥತೆ ನಂತರ ಅದು ಸರಿಯಾಗಲಿದೆ ಎಂದು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ತೀವ್ರವಾದ ಹೊಟ್ಟೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ನಂತರ ಎರಡು ಬಾರಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪದ್ಮಾವತಿ ನಂತರ 2010 ರಲ್ಲಿ ಇಲ್ಲಿನ ಮತ್ತೊಂದು ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿ ಸ್ಕ್ಯಾನ್ ಮಾಡುವಾಗ ಆಕೆಯ ದೇಹದ ಹೊಟ್ಟೆ ಮತ್ತು ಹಿಂಭಾಗದಲ್ಲಿ ಕೆಲವು ಸೂಜಿ ಇರುವುದು ಕಂಡು ಬಂದಿದೆ. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ 3.2 ಸೆಂ.ಮೀ ಶಸ್ತ್ರಚಿಕಿತ್ಸಾ ಸೂಜಿಯನ್ನು ತೆಗೆದುಹಾಕಲಾಯಿತು, ನಂತರ ಅವರು ಗ್ರಾಹಕರ ವೇದಿಕೆಗೆ ದೂರು ನೀಡಿದ್ದಾರೆ.

ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವಾಗ ಮತ್ತು ಶಸ್ತ್ರಚಿಕಿತ್ಸಾ ಸೂಜಿಯನ್ನು ತೆಗೆಯುವಾಗ ದೂರುದಾರರಿಗೆ ಸುಮಾರು 32 ವರ್ಷ ವಯಸ್ಸಾಗಿತ್ತು ಎಂದು ವೇದಿಕೆ ಗಮನಿಸಿದೆ. ಶಸ್ತ್ರಚಿಕಿತ್ಸೆಯ ಸೂಜಿಯನ್ನು ತೆಗೆಯುವವರೆಗೂ ತೀವ್ರವಾದ ನೋವು ಅನುಭವಿಸಿದ್ದಾರೆ. ಅವರು ಐದು ಲಕ್ಷ ರೂಪಾಯಿಗಳ ಪರಿಹಾರ ಪಡೆಯಲು ಅರ್ಹಳಾಗಿದ್ದಾರೆ ಎಂದು ಗ್ರಾಹಕರ ವೇದಿಕೆ ತಿಳಿಸಿದ್ದು, ವಿಮಾ ಕಂಪನಿಗೆ(ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್) ಮೊತ್ತವನ್ನು ಪಾವತಿಸಲು ನಿರ್ದೇಶಿಸಲಾಗಿದೆ. ಇಬ್ಬರು ವೈದ್ಯರು ದೂರುದಾರರಿಗೆ 50,000 ರೂ. ವ್ಯಾಜ್ಯ ವೆಚ್ಚವನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read