
ಬೆಂಗಳೂರಿನ ಪೀಕ್ ಹವರ್ ಟ್ರಾಫಿಕ್ ಜಾಮ್ ಗೆ ಕುಖ್ಯಾತಿ. ನಗರದ ನಿವಾಸಿಗಳು ಬೇರೆಡೆಗೆ ಹೋಗಲು ಇಂತಹ ಸಮಯದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ನಲ್ಲೇ ಸಿಲುಕಿ ಸಮಯ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಇಂತಹ ಸಮಯದಲ್ಲಿ ಕ್ಯಾಬ್, ಆಟೋಗಳು ಸಹ ಸಿಗುವುದು ಕಷ್ಟ . ಇತ್ತೀಚಿಗೆ ವ್ಯಕ್ತಿಯೊಬ್ಬರು ಪೀಕ್ ಹವರ್ ನಲ್ಲಿ ಉಬರ್ ನಲ್ಲಿ ಆಟೋವನ್ನ ಬುಕ್ ಮಾಡಿದ್ದಾರೆ. ಅದರಲ್ಲಿ ನಿಮ್ಮ ಹುಬ್ಬೇರಿಸುವ ಅಂಶ ಎಂದರೆ ಬುಕ್ ಮಾಡಿದ ನಂತರ ಆಟೋ ಗ್ರಾಹಕರ ಬಳಿ ಬರಲು ಬೇಕಾಗಿರುವ ಸಮಯ ಬರೋಬ್ಬರಿ 71 ನಿಮಿಷ.
ಭಾರೀ ಟ್ರಾಫಿಕ್ ನಡುವೆಯೂ 24 ಕಿಲೋ ಮೀಟರ್ ದೂರದಲ್ಲಿದ್ದ ಆಟೋ ಚಾಲಕ ಬುಕಿಂಗ್ ಮನವಿ ಸ್ವೀಕರಿಸಿದ್ದಕ್ಕೆ ಗ್ರಾಹಕರಾದ ಅನುಶಂಕ್ ಜೈನ್ ಚಾಲಕನನ್ನು ಗೌರವಿಸುತ್ತಾ ಸ್ಕ್ರೀನ್ ಶಾಟ್ ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಆಟೋ ಗ್ರಾಹಕರ ಬಳಿ ಬರಲು 71 ನಿಮಿಷ ಬೇಕಾಗಿದೆ. ಇದರ ಬಗ್ಗೆ ಹುಬ್ಬೇರಿಸುತ್ತಾ ಅಭಿಪ್ರಾಯ ಹಂಚಿಕೊಂಡಿರುವ ನೆಟ್ಟಿಗರು ನೀವೇ ಅದೃಷ್ಟವಂತರು. ನಿಮಗೆ ಆಟೋ ಬುಕ್ ಆಗಿದೆ. ಆದರೆ ಕಳೆದೊಂದು ವಾರದಿಂದ ನಾನು ಒಂದೇ ಒಂದು ಉಬರ್ ಆಟೋ ಬುಕ್ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
https://twitter.com/madmax_anushank/status/1658370070706520064?ref_src=twsrc%5Etfw%7Ctwcamp%5Etweetembed%7Ctwterm%5E1
