ಬೆಂಗಳೂರು : ಖಾಸಗಿ ನೀರಿನ ಟ್ಯಾಂಕರ್ ಗಳಿಗೆ ಹೊಸ ದರ ನಿಗದಿಪಡಿಸಿ ಜಿಲ್ಲಾಡಳಿತ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದ್ದು, ಬೆಂಗಳೂರು ನಗರ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 24,000 ಲೀಟರ್ ಮತ್ತು ಮೇಲ್ಪಟ್ಟು ಸಾಮರ್ಥ್ಯದ ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ 200 ಖಾಸಗಿ ನೀರಿನ ಟ್ಯಾಂಕರ್ಗಳನ್ನು ಬಾಡಿಗೆ ಮೇರೆಗೆ ಉಪಯೋಗಿಸಲು ಧರವನ್ನು ನಿಗಧಿಪಡಿಸಲು ಕೋರಿದ್ದು, ಅದರಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ದರ ನಿಗಧಿಪಡಿಸಲು ತಾಂತ್ರಿಕ ಸಮಿತಿಯನ್ನು ರಚಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸದರಿ ತಾಂತ್ರಿಕ ಸಮಿತಿಯೂ ಕುಡಿಯುವ ನೀರಿನ ಖಾಸಗಿ ನೀರಿನ ಟ್ಯಾಂಕರ್ ಗಳ ದರ ನಿಗಧಿಪಡಿಸುವ ಬಗ್ಗೆ ಸಾಧಕ-ಬಾಧಕಗಳು, ಲೋಕೋಪಯೋಗಿ ಇಲಾಖೆಯ ಎಸ್.ಆರ್. ದರಗಳು ಮತ್ತು ವಾಸ್ತವಿಕ ಲಭ್ಯವಿರುವ ಅಂಕಿ- ಅಂಶಗಳನ್ನು ಅವಲೋಕಿಸಿ ಸಮಗ್ರ ಮಾಹಿತಿಯೊಂದಿಗೆ ದರಗಳನ್ನು ವಿಶ್ಲೇಶಿಸಿ ದರ ನಿಗಧಿಪಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read