ಬೆಂಗಳೂರು : ನೀರಿನ ಉಳಿತಾಯಕ್ಕಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಲು ಕಳೆದ ವರ್ಷ ಜಲಮಂಡಳಿ ಸೂಚನೆ ನೀಡಿತ್ತು, ಇದೀಗ ಈ ಬಾರಿ ಮತ್ತೆ ಜಲಮಂಡಳಿ ಈ ಸೂಚನೆ ನೀಡಿದೆ.
ನೀರಿನ ಅಭಾವದ ಹಿನ್ನೆಲೆಯಲ್ಲಿ ವಾಣಿಜ್ಯ ಕಟ್ಟಡಗಳು, ಅಪಾರ್ಟ್ಮೆಂಟ್ ಗಳು, ಮಾಲ್ ಗಳು, ಹೋಟೆಲ್, ರೆಸ್ಟೋರೆಂಟ್ ಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸುವಂತೆ ಜಲಮಂಡಳಿ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವವನ್ನು ತಡೆಯುವ ನಿಟ್ಟಿನಲ್ಲಿ ಅನಗತ್ಯ ನೀರು ಪೋಲಾಗುವ ಸ್ಥಳಗಳಲ್ಲಿ ನಲ್ಲಿಗಳಿಗೆ ಏರೇಟರ್ ಅಳವಡಿಸುವಂತೆ ಜಲಮಂಡಳಿ ಸೂಚಿಸಿದೆ. ಏರೇಟರ್ ಬಳಕೆಯನ್ನು ಕಡ್ಡಾಯ ಮಾಡುವುದರಿಂದ ಶೇ. 60 ರಿಂದ 85 ಪ್ರಮಾಣದ ನೀರನ್ನು ಉಳಿತಾಯ ಮಾಡಲು ಸಾಧ್ಯವಿದೆ. ಈ ಮೂಲಕ ನಿತ್ಯ 1.7 ಕೋಟಿ ಲೀಟರ್ ನೀರು ಉಳಿತಾಯವಾಗಲಿದೆ ಎಂದು ತಿಳಿಸಿದೆ.