BREAKING: ಬ್ಯಾಡ್ ಟಚ್ ಮಾಡಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಿಡಿಗೇಡಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಇಸ್ಲಾಂವುದ್ದೀನ್(31) ಎಂಬುವನನ್ನು ಬಂಧಿಸಲಾಗಿದೆ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿ ಆರೋಪಿ ಪರಾರಿ ಆಗುತ್ತಿದ್ದ. ಒಂಟಿಯಾಗಿ ರಸ್ತೆಯಲ್ಲಿ ಓಡಾಡುವ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು. ಬೈಕ್ ನಲ್ಲಿ ಓಡಾಡುವ ಮಹಿಳೆಯರನ್ನು ಫಾಲೋ ಮಾಡುತ್ತಿದ್ದ ಆರೋಪಿ ಯಾರೂ ಇಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಅನುಚಿತವಾಗಿ ವರ್ತಿಸುತ್ತಿದ್ದ. ಬ್ಯಾಡ್ ಟಚ್ ಮಾಡಿ ಬೈಕ್ ನಲ್ಲಿ ಪರಾರಿ ಆಗುತ್ತಿದ್ದ.

ಜನವರಿ 23ರಂದು ಬೆಳಗ್ಗೆ ಇಸ್ಲಾಂ ಉದ್ದೀನ್ ಬನಶಂಕರಿ ಎರಡನೇ ಹಂತದಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದ. ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿ ಪರಾರಿಯಾಗಿದ್ದು, ಅವರು ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಇಸ್ಲಾಂವುದ್ದಿನ್ ನನ್ನು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read