99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಯುವಕನ ಡಿಎಲ್‌ ‌ʼಸಸ್ಪೆಂಡ್ʼ

ಒಟ್ಟು 99 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಬೈಕ್​ ಸವಾರನನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಕೊನೆಗೂ ಹಿಡಿದು, 56 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮೈಕೋ ಲೇಔಟ್​ ಸಂಚಾರಿ ಪೊಲೀಸರು ಬೈಕ್​ ವಶಕ್ಕೆ ಪಡೆದಿದ್ದು ಬೈಕ್​ ಸವಾರನ ಮೇಲೆ ಎಫ್ಐಆರ್​ ದಾಖಲಿಸಿದ್ದಾರೆ.

ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಅಲೋಕ್​ ಕುಮಾರ್​ ದಕ್ಷಿಣ ವಿಭಾಗದ ಟ್ರಾಫಿಕ್​ ಡಿಸಿಪಿ ಹಾಗೂ ಅವರ ತಂಡವನ್ನು ಅಭಿನಂದಿಸಿದ್ದಾರೆ.

ಸೋಶಿಯಲ್​ ಮೀಡಿಯಾ ಬಳಕೆದಾರರು ವೇಗಾ ಸಿಟಿ ಜಂಕ್ಷನ್​ ಬಳಿ ಟ್ರಾಫಿಕ್​ ನಿಯಮ ಉಲ್ಲಂಘನೆ ಮಾಡುತ್ತಿದ್ದ ಸವಾರನ ವಿಡಿಯೋ ಅಪ್​ಲೊಡ್​ ಮಾಡಿದ ಬಳಿಕ ಬೈಕ್​ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸನ್ನ ಕುಮಾರ್​ ಎಂಬ ವ್ಯಕ್ತಿಯು ಎಕ್ಸ್​ನಲ್ಲಿ ಬೆಂಗಳೂರು ಟ್ರಾಫಿಕ್​ ಪೊಲೀಸರು ಹಾಗೂ ಅಲೋಕ್​ಕುಮಾರ್​ರನ್ನು ಟ್ಯಾಗ್​ ಮಾಡಿ ಈ ವಿಡಿಯೋ ಹಂಚಿಕೊಂಡಿದ್ದರು.

ಸೋಶಿಯಲ್​ ಮೀಡಿಯಾದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಬಗ್ಗೆ ಪ್ರಸನ್ನ ಕುಮಾರ್​ ಅಪ್​ಲೋಡ್​ ಮಾಡಿದ್ದ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಸಂಚಾರಿ ಠಾಣೆ ಪೊಲೀಸರು, ಯಾವುದೇ ಸಂಚಾರ ನಿಯಮ ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ಸೋಶಿಯಲ್ ಮೀಡಿಯಾದ ಮೂಲಕ ಜನರು ನಮಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

https://twitter.com/alokkumar6994/status/1706965105899184221

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read