BREAKING: ಬೆಂಗಳೂರಲ್ಲಿ ವೃದ್ಧೆ ಕೊಂದು ಶವ ಕತ್ತರಿಸಿದ ಪ್ರಕರಣ: ಶ್ವಾನದಳ ಸಹಾಯದಿಂದ ಆರೋಪಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ವೃದ್ಧೆ ಕೊಂದು ಶವ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರಂ ಠಾಣೆ ಪೋಲೀಸರು ಆರೋಪಿ ದಿನೇಶ್ ನನ್ನು ಬಂಧಿಸಿದ್ದಾರೆ.

ವೃದ್ದೆಯ ಕೈಕಾಲುಗಳನ್ನು ಆವಲಹಳ್ಳಿ ಕೆರೆಗೆ ಆರೋಪಿ ಎಸೆದಿದ್ದಾನೆ. ದೇಹದ ಉಳಿದ ಭಾಗಗಳನ್ನು ಡ್ರಮ್ ನಲ್ಲಿ ತುಂಬಿಸಿ ಇಟ್ಟಿದ್ದ. ವೃದ್ಧೆ ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಆರೋಪಿ ವಾಸವಾಗಿದ್ದು, ಶ್ವಾನದಳದ ಸಹಾಯದಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಹತ್ಯೆಯಾದ ಸುಶೀಲಮ್ಮ ಕುಟುಂಬಕ್ಕೆ ದಿನೇಶ್ ಅತ್ಯಾಪ್ತನಾಗಿದ್ದ. ಉನ್ನತ ಹುದ್ದೆಯಲ್ಲಿದ್ದು, ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಸ್ಥಳೀಯ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ. ಸುಶೀಲಮ್ಮ ಕೊಲೆ ಪ್ರಕರಣದಲ್ಲಿ ದಿನೇಶ್ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗಿದೆ. ಸುಶೀಲಮ್ಮ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದ ದುಷ್ಕರ್ಮಿ ನಿಸರ್ಗ ಬಡಾವಣೆಯ ಪಾಳು ಮನೆ ಪಕ್ಕದಲ್ಲೇ ಡ್ರಮ್ ನಲ್ಲಿ ಹಾಕಿಟ್ಟಿದ್ದ. ಸ್ಥಳೀಯರು ಕಸ ಹಾಕುವ ಜಾಗದಲ್ಲಿ ಶವ ಇಟ್ಟು ಪರಾರಿಯಾಗಿದ್ದ ಆತನನ್ನು ಪತ್ತೆ ಹಚ್ಚಿದ ಕೆಆರ್ ಪುರಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read