ಬೆಂಗಳೂರಿನ ಕಲ್ಯಾಣ ನಗರ ಸಮೀಪದ ರಿಂಗ್ ರೋಡ್ ನಲ್ಲಿ ಹಾಡಹಗಲೇ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೆಲಸದಲ್ಲಿ ಸ್ಟ್ರಿಕ್ಟ್ ಆಗಿ ವರ್ತಿಸುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಲು ಸಹೋದ್ಯೋಗಿಯೇ ಹಣ ನೀಡಿ ಗೂಂಡಾಗಳನ್ನು ಕಳುಹಿಸಿದ್ದು ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ವಾಸಿಮ್ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ, ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದ್ದ ವಿಡಿಯೋ ಒಂದನ್ನು ಹಂಚಿಕೊಂಡು ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮೂರ್ನಾಲ್ಕು ಮಂದಿ ಕಬ್ಬಿಣದ ರಾಡ್ ನಿಂದ ಮನಬಂದಂತೆ ಥಳಿಸುತ್ತಿರುವುದು ದಾಖಲಾಗಿತ್ತು.
ವಿಡಿಯೋ ವೀಕ್ಷಿಸಿ ಕೂಡಲೇ ಕಾರ್ಯತತ್ಪರರಾದ ಹೆಣ್ಣೂರು ಠಾಣೆಯ ಇನ್ಸ್ಪೆಕ್ಟರ್ ಹಲ್ಲೆಗೊಳಗಾದ ಸುರೇಶ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿ ಆತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಐವರು ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಗಳ ವಿಚಾರಣೆ ವೇಳೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಆಡಿಟರ್ ಆಗಿರುವ ಸುರೇಶ್ ಕಚೇರಿಯಲ್ಲೇ ಕೆಲಸ ನಿರ್ವಹಿಸುತ್ತಿದ್ದ ಉಮಾಶಂಕರ್ ಹಾಗೂ ವಿನೇಶ್ ಎಂಬವರು ಈ ಹಲ್ಲೆ ಪ್ರಕರಣದ ಹಿಂದೆ ಇರುವುದು ತಿಳಿದು ಬಂದಿದೆ. ಸುರೇಶ್ ಕೆಲಸದಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ದರು ಎನ್ನಲಾಗಿದ್ದು, ಇದರಿಂದಾಗಿ ಉಮಾಶಂಕರ್ ಹಾಗೂ ವಿನೇಶ್ ತೊಂದರೆಗೊಳಗಾಗಿದ್ದರು.
ಅಲ್ಲದೆ ಇವರಿಬ್ಬರ ಕಾರ್ಯ ನಿರ್ವಹಣೆ ಕುರಿತು ಸುರೇಶ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಉಮಾಶಂಕರ್ ಹಾಗೂ ವಿನೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಇವರಿಬ್ಬರು ಗೂಂಡಾಗಳಿಗೆ ಹಣ ನೀಡಿ ಹಲ್ಲೆ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ಪೊಲೀಸರು, ಉಮಾಶಂಕರ್, ವಿನೇಶ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
https://twitter.com/WazBLR/status/1774994124837679109?ref_src=twsrc%5Etfw%7Ctwcamp%5Etweetembed%7Ctwterm%5E1774994124837679109%7Ctwgr%5Ea4688afac5b9cde15d8a3d70a615d1037a89c6b9%7Ctwcon%5Es1_&ref_url=https%3A%2F%2Fwww.news18.com%2Findia%2Fbengaluru-men-hire-goons-to-beat-strict-colleague-on-busy-kalyan-nagar-road-5-arrested-attempt-to-murder-viral-video-karnataka-crime-news-8841987.html