ಭೂಕುಸಿತ ದುರಸ್ತಿ ಕಾರ್ಯ ಪೂರ್ಣ: ಬೆಂಗಳೂರು- ಮಂಗಳೂರು ರೈಲು ಸಂಚಾರ ಪುನಾರಂಭ

ಹಾಸನ: ಸುಬ್ರಹ್ಮಣ್ಯ – ಸಕಲೇಶಪುರ ರೈಲು ನಿಲ್ದಾಣಗಳ ನಡುವಿನ ಭೂಕುಸಿತ ನಂತರದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಬೆಂಗಳೂರು- ಮಂಗಳೂರು  ರೈಲು ಸಂಚಾರ ಪುನರಾರಂಭವಾಗಿದೆ.

ಗುರುವಾರ ಯಶವಂತಪುರ -ಮಂಗಳೂರು ಜಂಕ್ಷನ್ ಗೊಮಟೇಶ್ವರ ಎಕ್ಸ್ ಪ್ರೆಸ್ ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಿದೆ. ಕಡಗರವಳ್ಳಿ -ಎಡಕಮೇರಿ ಸಮೀಪ ರೈಲು ಮಾರ್ಗದ ಕೆಳಬದಿ ಭೂಕುಸಿತ ಉಂಟಾಗಿತ್ತು. ಇದರ ಕಾರಣ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಿರಂತರ ಮಳೆಯ ನಡುವೆಯೂ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗಿದೆ.

ರೈಲು ಇಂಜಿನ್ ಓಡಿಸುವ ಮೂಲಕ ಸುರಕ್ಷತೆ ಪರಿಶೀಲಿಸಲಾಗಿದೆ. ಪೂರ್ಣ ಸಾಮಗ್ರಿ ಹೊತ್ತ ಗೂಡ್ಸ್ ರೈಲು ಯಶಸ್ವಿಯಾಗಿ ಸಂಚರಿಸಿದ್ದು, ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ಸ್ಥಳದಲ್ಲಿ ರೈಲಿನ ವೇಗದ ಮಿತಿಯನ್ನು 15 ಕಿ.ಮೀ.ಗೆ ನಿಗದಿಗೊಳಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read