20 ಕೋಟಿ ರೂ. ಕೊಡ್ತೀನಿ ಎಂದ್ರೂ ನಾಯಿ ಮಾರಾಟ ಮಾಡದ ಬೆಂಗಳೂರಿಗ…!

ನಾಯಿಗೂ ಒಂದು ಕಾಲ ಬರುತ್ತೆ ಕಣ್ರೀ. ಬರೋಬ್ಬರಿ 20 ಕೋಟಿ ಬೆಲೆಬಾಳುವ ನಾಯಿ ಅದು. ಆದ್ರೂ ಅದರ ಮಾಲೀಕ ಮಾತ್ರ 20 ಕೋಟಿಗೂ ಆ ಶ್ವಾನವನ್ನ ಮಾರಾಟ ಮಾಡಿಲ್ಲ. ಇದು ಆ ವ್ಯಕ್ತಿಗೆ ತನ್ನ ನಾಯಿಯ ಮೇಲಿನ ಪ್ರೀತಿ ಎಷ್ಟೆಂಬುದನ್ನ ಸಾಬೀತು ಪಡಿಸಿದೆ.

ಅನೇಕರಿಗೆ ನಾಯಿಗಳು ಸಹ ಕುಟುಂಬದ ಸದಸ್ಯರಿದ್ದಂತೆ. ಆದ್ದರಿಂದಲೇ ಬೆಂಗಳೂರಿನ ಎಸ್. ಸತೀಶ್ ತಮ್ಮ ನಾಯಿಯನ್ನು ಮಾರಾಟ ಮಾಡುವಂತೆ ಪ್ರಸ್ತಾಪ ಬಂದಾಗ ಅವರು ನಿರಾಕರಿಸಿದ್ದಾರೆ. ಬರೋಬ್ಬರಿ 20 ಕೋಟಿ ರೂಪಾಯಿ ಮೊತ್ತಕ್ಕೂ ಮಾರಾಟ ಮಾಡಲು ಒಲ್ಲೆ ಎಂದಿದ್ದಾರೆ. ಅರೆ…! ನಾಯಿಗೆ ಅಷ್ಟೊಂದು ಬೆಲೆ ಏಕೆ? ಅಂಥದ್ದೇನಿದೆ ಎಂದು ನೀವು ಯೋಚಿಸುತ್ತಿದ್ದರೆ, ಸತೀಶ್ ಅವರು ಸಾಕಿರೋದು ಕಕೇಶಿಯನ್ ಶೆಫರ್ಡ್ ಹೇಡರ್ ನಾಯಿ.

ಹೇಡರ್ ಒಂದು ರೀತಿಯ ಕಕೇಶಿಯನ್ ಶೆಫರ್ಡ್‌ಗಳಲ್ಲಿ ಒಂದಾಗಿದೆ ಮತ್ತು ಪ್ರಸ್ತುತ 6-ಅಡಿ ಎತ್ತರವಿದೆ. ಅದರ ಹೆಮ್ಮೆಯ ಮಾಲೀಕ ಸತೀಶ್ ಪ್ರಕಾರ ನಾಯಿಯು ಬಹುತೇಕ ಹೆಣ್ಣು ಸಿಂಹದ ಗಾತ್ರವನ್ನು ಹೋಲುತ್ತದೆ. ಈ ಅಪರೂಪದ ನಾಯಿಯು ಬೆಂಗಳೂರಿನಲ್ಲಿ ನೆಲೆಸಿರುವ ಹೈದರಾಬಾದ್‌ನ ಬಿಲ್ಡರ್ ಸೇರಿದಂತೆ ಹಲವರ ಕಣ್ಣಿಗೆ ಬಿದ್ದಿದೆ. ಅವರು ಹೇಡರ್‌ಗಾಗಿ 20 ಕೋಟಿ ರೂಪಾಯಿಗಳನ್ನು ಪಾವತಿಸಲು ಸಹ ಮುಂದಾದರು. ಆದರೆ, ಸತೀಶ್ ಬೆಲೆಬಾಳುವ ತಮ್ಮ ಪ್ರೀತಿಯ ನಾಯಿಯನ್ನ ಮಾರಾಟ ಮಾಡಲು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ಬದಲಾಗಿ, ಬೆಂಗಳೂರಿನ ಬಿಆರ್‌ಎಸ್ ಗ್ರ್ಯಾಂಡ್ಯೂರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹೇಡರ್ ರ್ ಶೋಸ್ಟಾಪರ್ ಆಗಿ ಸತೀಶ್ ಅದ್ದೂರಿ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ವಿಶೇಷ ಆಕರ್ಷಣೆಗಳ ಜೊತೆಗೆ, ಈವೆಂಟ್‌ನಲ್ಲಿ ಫ್ಯಾಶನ್ ಶೋ ಕೂಡ ಇರುತ್ತದೆ. ಅಲ್ಲಿ ಮಾಡೆಲ್‌ಗಳು ವಿಶಿಷ್ಟ ತಳಿಯ ಶ್ವಾನಗಳೊಂದಿಗೆ ಹೆಜ್ಜೆ ಹಾಕುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read