ನಿನ್ನ ಹೆಂಡ್ತಿಯನ್ನು ಲೈಂಗಿಕ ಕ್ರಿಯೆ ನಡೆಸಲು ಕಳಿಸು ಎಂದಿದ್ದಕ್ಕೆ ಭೀಕರ ಹತ್ಯೆ; ವಾರದ ಬಳಿಕ ಕಾರಣ ಪತ್ತೆ

Bengaluru man kills neighbour after drunken brawl over wife, arrested

ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿನ್ನ ಹೆಂಡ್ತಿಯನ್ನು ಕಳಿಸು ಎಂದಿದ್ದಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರೋ ಘಟನೆ ಬೆಂಗಳೂರಲ್ಲಿ ನಡೆದಿದ್ದು ತಡವಾಗಿ ಘಟನೆಯ ಕಾರಣ ತಿಳಿದುಬಂದಿದೆ.

ಸಿದ್ದಾಪುರ ಪೊಲೀಸರು ಕಳೆದ ವಾರ ಬೆಂಗಳೂರಿನ ಜಯನಗರ I ಬ್ಲಾಕ್‌ನಲ್ಲಿರುವ ಮನೆಯ ಸಮೀಪ ಶವವಾಗಿ ಪತ್ತೆಯಾದ 43 ವರ್ಷದ ವ್ಯಕ್ತಿಯ ಸಾವಿನ ಕಾರಣವನ್ನು ಕಂಡುಹಿಡಿದಿದ್ದಾರೆ. ನಿನ್ನ ಹೆಂಡತಿಯನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ ನಂತರ ನೆರೆಹೊರೆಯ ವ್ಯಕ್ತಿ ಅವನನ್ನು ಕೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ವರದಿಗಳ ಪ್ರಕಾರ, ಕೆಎಂ ಕಾಲೋನಿ ನಿವಾಸಿ ಸುರೇಶ್ (45) ಎಂಬಾತನನ್ನು ತನ್ನ ನೆರೆಹೊರೆಯವರಾದ ಮಣಿಕಂಠನನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಇಬ್ಬರು ದಿನಗೂಲಿ ಕೆಲಸ ಮಾಡುತ್ತಿದ್ದರು. ಮಣಿಕಂಠನ ಸಹೋದರಿ ನೀಡಿದ ದೂರಿನ ಮೇರೆಗೆ ಆರೋಪಿಯ ಬಂಧನ ನಡೆದಿದ್ದು, ಕೊಲೆಯಲ್ಲಿ ಸುರೇಶ್‌ನ ಕೈವಾಡವಿರೋದನ್ನ ಆತನೇ ಒಪ್ಪಿಕೊಂಡಿದ್ದಾನೆ.

ಇಬ್ಬರೂ ಒಂದೇ ಬೀದಿಯಲ್ಲಿ ಉಳಿದುಕೊಂಡಿದ್ದರು ಆದರೆ ಪರಸ್ಪರ ಪರಿಚಯವಿರಲಿಲ್ಲ ಎಂದು ವರದಿಯಾಗಿದೆ. ಮಾರ್ಚ್ 8ರಂದು ಬೆಳಗ್ಗೆ ಮಣಿಕಂಠನ ಮನೆಗೆ ಬಂದ ಸುರೇಶ ತನ್ನ ಮನೆಯ ಬಳಿ ಕುಡಿದು ಮಲಗಿರುವ ನಿಮ್ಮ ಮಗನನ್ನು ಕರೆದುಕೊಂಡು ಹೋಗಿ ಎಂದು ಆತನ ತಾಯಿಗೆ ಹೇಳಿದ್ದಾನೆ. ಈ ಘಟನೆಯ ಮೂರು ದಿನ ಮುನ್ನ ಮಣಿಕಂಠ ಪ್ರತಿದಿನ ಮದ್ಯಸೇವನೆ ಮಾಡುತ್ತಿದ್ದ.

ಮನೆಗೆ ಬಂದ ಮಣಿಕಂಠನ ಮೂಗಿನಿಂದ ರಕ್ತಸ್ರಾವವಾಗಿದ್ದನ್ನ ಆಕೆಯ ಸೋದರಿ ನೋಡಿದ್ದರು. ಅಸ್ವಸ್ಥಗೊಂಡಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ರೆ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಮಣಿಕಂಠ ಅವರು ಆಂತರಿಕ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆತನ ನೆತ್ತಿಯ ಮೇಲೆ ಗಾಯಗಳಾಗಿದ್ದು, ತಲೆಬುರುಡೆಯಲ್ಲಿ ರಕ್ತಸ್ರಾವವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಪ್ರದೇಶದಿಂದ ಕಣ್ಗಾವಲು ಕ್ಯಾಮೆರಾವನ್ನು ಪರಿಶೀಲಿಸಿದ ನಂತರ ಮಣಿಕಂಠನ ದೇಹವನ್ನು ಸುರೇಶ್ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದರು. ಬಳಿಕ ಕಸ್ಟಡಿಗೆ ತೆಗೆದುಕೊಂಡ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ. ಮಾ.7ರಂದು ಕಂಠಪೂರ್ತಿ ಕುಡಿದು ಮಣಿಕಂಠ ಹಾಗೂ ತಾನು ರಸ್ತೆಯಲ್ಲಿ ಮಾತನಾಡಿಕೊಂಡಿದ್ದನ್ನು ಆತ ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ.

ಸುರೇಶ್ ಮನೆಗೆ ಪ್ರವೇಶಿಸಿದ್ದ ಮಣಿಕಂಠನು ಆತನ ಹೆಂಡತಿಯನ್ನು ಲೈಂಗಿಕವಾಗಿ ತೊಡಗಿಸಿಕೊಳ್ಳಲು ಕಳುಹಿಸುವಂತೆ ಕೇಳಿದ್ದನು. ಕೋಪದ ಭರದಲ್ಲಿ ಸುರೇಶ್ ಮರದ ದಿಮ್ಮಿಯಿಂದ ಮಣಿಕಂಠನ ತಲೆಗೆ ಹೊಡೆದಿದ್ದಾನೆ ನಂತರ ಅವನು ಪ್ರಜ್ಞಾಹೀನನಾಗಿ ಬಿದ್ದಿದ್ದ. ಬಳಿಕ ಮಣಿಕಂಠ ಮಲಗಿರುವಂತೆ ಕಾಣಿಸುವಂತೆ ಸುರೇಶ ಆತನನ್ನು ಮನೆಯಿಂದ ಹೊರಗೆ ಎಳೆದು ತಂದು ಹಾಕಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read