ಬೆಂಗಳೂರು : ಜ.18 ರಿಂದ ‘ಲಾಲ್ ಬಾಗ್ ಫ್ಲವರ್ ಶೋ’ ಆರಂಭ, ಈ ಬಾರಿಯ ಥೀಮ್ ಏನು?

ಬೆಂಗಳೂರು : ಜನವರಿ 18ರಿಂದ 28 ರವರೆಗೆ ಬೆಂಗಳೂರಿನ ‘ಲಾಲ್ ಬಾಗ್ ’ ನಲ್ಲಿ ಫ್ಲವರ್ ಶೋ ನಡೆಯಲಿದೆ .

ಜ.18ರಂದು ಸಿಎಂ ಸಿದ್ಧರಾಮಯ್ಯ ಫಲಪುಷ್ಪ ಪ್ರದರ್ಶನಕ್ಕೆ ಸಂಜೆ.6ಗಂಟೆಗೆ ಲಾಲ್ ಬಾಗ್ ನ ಗಾಜಿನಮನೆಯಲ್ಲಿ ಚಾಲನೆ ನೀಡಲಿದ್ದಾರೆ. ಈ ಬಾರಿ ವಿಶ್ವಗುರು ಬಸವಣ್ಣ , ಗಣರಾಜ್ಯೋತ್ಸವ ಥೀಮ್ ನಲ್ಲಿ ಫ್ಲವರ್ ಶೋ ನಡೆಯಲಿದೆ .

2024 ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 215ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 18 ರಿಂದ 28ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್‌ ಶೋ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಡಿಸಿಎಂ ಡಿಕೆ ಶಿವಕುಮಾರ್, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಖ್ಯಾತ ವಿದ್ವಾಂಸ ನಾಡೋಜ ಡಾ.ಗೊ.ರು ಚನ್ನಬಸಪ್ಪ ಭಾಗವಹಿಸಲಿದ್ದಾರೆ.

ಸಂಗ್ರಹ ಚಿತ್ರ

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read