ಬೆಂಗಳೂರಿಗರೇ ನಾಳೆ ‘ಜಲಮಂಡಳಿ’ ಫೋನ್ ಇನ್ ಕಾರ್ಯಕ್ರಮ, ನೀರಿನ ಸಮಸ್ಯೆಯಿದ್ರೆ ಈ ಸಂಖ್ಯೆಗೆ ಕರೆ ಮಾಡಿ

ಬೆಂಗಳೂರು : ಜಲಮಂಡಳಿ ಅಧ್ಯಕ್ಷ ವಿ.ರಾಮ್ಪ್ರಸಾತ್ ಮನೋಹರ್ ಅವರು ಆಗಸ್ಟ್ 9 ಶುಕ್ರವಾರ ಬೆಳಗ್ಗೆ 9.30 ರಿಂದ 10.30ರ ವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಾರ್ವಜನಿಕರು ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ, ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಮಾತನಾಡಿ ಪರಿಹಾರ ಪಡೆದುಕೊಳ್ಳಬಹುದು.

ಗ್ರಾಹಕರು ತಮ್ಮ ಆರ್ಆರ್ ಸಂಖ್ಯೆಯನ್ನು ತಿಳಿಸಿ ದೂರು ನೀಡಬಹುದಾಗಿದೆ. ದೂರವಾಣಿ ಸಂಖ್ಯೆ 080 22945119 ಅಥವಾ 080 22229639 ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read