ಸಂಕ್ರಾಂತಿ ಸಡಗರಕ್ಕೆ ಬೆಲೆ ಏರಿಕೆ ಬಿಸಿ; ಗಗನ ಮುಟ್ಟಿದ ಹೂ – ಹಣ್ಣಿನ ಬೆಲೆ

ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಹೂ- ಹಣ್ಣಿನ ಬೆಲೆ ಗಗನಕ್ಕೇರಿದೆ. ಸಂಕ್ರಾಂತಿ, ಪೊಂಗಲ್ ಹಬ್ಬಕ್ಕೂ ಮುನ್ನ ಕಳೆದ ಒಂದು ವಾರದಿಂದ ನಗರದಲ್ಲಿ ಹೂವಿನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.

ನಗರದ ಮಾರುಕಟ್ಟೆಗಳಲ್ಲಿ ಹೂ-ಹಣ್ಣಿನ ಬೆಲೆಗಳು ದ್ವಿಗುಣಗೊಂಡಿದೆ. ಹಬ್ಬದ ಹಿನ್ನೆಲೆಯಲ್ಲಿ ಮಲ್ಲಿಗೆಗೆ ಹೆಚ್ಚಿನ ಬೇಡಿಕೆಯಿದೆ. ಮಲ್ಲೇಶ್ವರಂ 11ನೇ ಕ್ರಾಸ್‌ನ ಹೂವಿನ ಮಾರುಕಟ್ಟೆಯಲ್ಲಿ ಒಂದು ಮೊಳ ಮಲ್ಲಿಗೆ ಹೂವು 60 ರಿಂದ 120 ರೂ.ಗೆ ಏರಿದರೆ, ಮಲ್ಲಿಗೆ ಹಾರ 600 ರಿಂದ 1200 ರೂ.ಗೆ ಏರಿಕೆಯಾಗಿದೆ.

ವ್ಯಾಪಕವಾಗಿ ಬಳಸಲಾಗುವ ಸೇವಂತಿಗೆ 25 ರೂ.ನಿಂದ 50 ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ ಸೇವಂತಿಗೆ ಹಾರ 100 ರೂ.ನಿಂದ 200 ರೂ.ಗೆ ಏರಿದೆ. ಕನಕಾಂಬರ ಹೂವು ಮಾರಿಗೆ ಮೊದಲು 60 ರೂ. ಇದ್ರೆ ಇದೀಗ 120 ರೂ.ಗೆ ಏರಿಕೆಯಾಗಿದೆ.

ಹೆಚ್ಚು ಬೇಡಿಕೆಯಿಂದಾಗಿ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಬಾಳೆಹಣ್ಣು ಕಿಲೋಗೆ 60 ರೂ.ನಿಂದ 70 ರೂ., ಸೇಬು 120 ರೂ.ನಿಂದ 150 ರೂ. ಆಗಿದೆ.

ದ್ರಾಕ್ಷಿ ಬೆಲೆ 250 ರಿಂದ 200 ರೂ.ಗೆ ಇಳಿಕೆಯಾಗಿದೆ ಎಂದು ರಸೆಲ್ ಮಾರುಕಟ್ಟೆಯ ಹಣ್ಣು ಮಾರಾಟಗಾರರೊಬ್ಬರು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read