ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅವಿವಾಹಿತರಿಗೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಿಗುವುದು ಕಷ್ಟವೇ. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೆ. ಆದರೆ ಇದೀಗ ಅದಕ್ಕೆ ಕಾರಣ ನೀಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಒಬ್ಬ ಬ್ಯಾಚುಲರ್‌ನ ಬಾಡಿಗೆಗೆ ಫ್ಲಾಟ್ ನೀಡಿದ ಫೋಟೋ ಇದಾಗಿದೆ. ಆತ ಬಿಟ್ಟು ಹೋದಾಗ ಮನೆಯ ತುಂಬಾ ಮದ್ಯದ ಬಾಟಲಿಗಳನ್ನು ನೋಡಬಹುದು. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇದು ಐಟಿ ಹಬ್ನ ಹಣೆಬರಹ ಎಂದು ಹಲವರು ಹೇಳುತ್ತಿದ್ದಾರೆ.
ಮಾಲೀಕರು ಬ್ಯಾಚುಲರ್‌ಗಳಿಗೆ ಏಕೆ ಮನೆಗಳನ್ನು ಬಾಡಿಗೆಗೆ ಕೊಡುವುದಿಲ್ಲ ಎನ್ನಲು ಇದು ಕಾರಣ ಎಂದು ಹಲವರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. “ದೊಡ್ಡ MNC” ಯಲ್ಲಿ ಕೆಲಸ ಮಾಡುತ್ತಿರುವ “ಶಿಕ್ಷಿತ” ಬ್ಯಾಚುಲರ್ ಬೆಂಗಳೂರಿನಲ್ಲಿ ಇದನ್ನು ಮಾಡಿದ್ದಾರೆ” ಎಂದು ರವಿ ಎಂಬ ಬಳಕೆದಾರರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದು ತಪ್ಪು. ಆದರೆ ಎಲ್ಲಾ ಅವಿವಾಹಿತರನ್ನೂ ಇದೇ ರೀತಿ ನೋಡುವುದು ಸರಿಯಲ್ಲ ಎಂದು ಹಲವರು ಕಮೆಂಟ್ನಲ್ಲಿ ತಿಳಿಸಿದ್ದಾರೆ.
https://twitter.com/ravihanda/status/1651157024032583686?ref_src=twsrc%5Etfw%7Ctwcamp%5Etweetembed%7Ctwterm%5E1651157024032583686%7Ctwgr%5E4e580f137d714a7883510361929e85512b0fb8e8%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fscenes-of-renting-home-to-a-bachelor-in-bengaluru-pics-of-alcohol-bottles-all-across-rooms-kitchen-go-viral
https://twitter.com/ravihanda/status/1651159114058461185?ref_src=twsrc%5Etfw%7Ctwcamp%5Etweetembed%7Ctwterm%5E1651159114058461185%7Ctwgr%5E4e580f137d714a7883510361929e85512b0fb8e8%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fscenes-of-renting-home-to-a-bachelor-in-bengaluru-pics-of-alcohol-bottles-all-across-rooms-kitchen-go-viral
https://twitter.com/aditya_gudla1/status/1651257759504162819?ref_src=twsrc%5Etfw%7Ctwcamp%5Etweetembed%7Ctwterm%5E1651257759504162819%7Ctwgr%5E4e580f137d714a7883510361929e85512b0fb8e8%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fscenes-of-renting-home-to-a-bachelor-in-bengaluru-pics-of-alcohol-bottles-all-across-rooms-kitchen-go-viral