ಹಾನಿಗೀಡಾದ ಬ್ಯಾಗೇಜ್: ಕುವೈತ್‌ ಏರ್‌ವೇಸ್‌ನಿಂದ 89,000ರೂ ಪರಿಹಾರ ಪಡೆದ ಬೆಂಗಳೂರು ಮೂಲದ ಕುಟುಂಬ

ವಿಮಾನ ಪ್ರಯಾಣದ ವೇಳೆ ತಮ್ಮ ಬ್ಯಾಗುಗಳು ಡ್ಯಾಮೇಜ್ ಆದ ವಿಚಾರವಾಗಿ ಕುವೈತ್‌ ಏರ್‌ವೇಸ್ ವಿರುದ್ಧ ನ್ಯಾಯಾಂಗ ದೂರು ಸಲ್ಲಿಸಿದ ಬೆಂಗಳೂರು ಮೂಲದ ಕುಟುಂಬವೊಂದು 59,620ರೂಗಳನ್ನು ಟಿಕೆಟ್ ದರದ ರೀಫಂಡ್‌ ಹಾಗೂ 30,000ರೂಗಳ ಹೆಚ್ಚುವರಿ ಪರಿಹಾರವನ್ನು ಪಡೆದುಕೊಂಡಿದೆ.

ನಗರದ ಅಲ್ಸೂರಿನ ನಿವಾಸಿ ಎಸ್ ರಾಜೇಂದ್ರನ್ ಎಂಬುವವರು ತಮ್ಮ ಮಡದಿ ಹಾಗೂ ಇತರ ಮೂವರೊಂದಿಗೆ ರಜೆಯ ಮೇಲೆ ಟರ್ಕಿಗೆ ತೆರಳಿದ್ದಾರೆ. ಬೆಂಗಳೂರಿನಿಂದ ಟರ್ಕಿಗೆ ನೇರ ವಿಮಾನವಿಲ್ಲದೇ ಇದ್ದ ಕಾರಣ ರಾಜೇಂದ್ರನ್ ಬೆಂಗಳೂರಿನಿಂದ ಮುಂಬಯಿ, ಅಲ್ಲಿಂದ ಇಸ್ತಾಂಬುಲ್ ಹಾಗೂ ಅಲ್ಲಿಂದ ಕಾಯ್ಸೇರಿಗೆ ಟಿಕೆಟ್ ಬುಕ್ ಮಾಡಿದ್ದಾರೆ.

ಮುಂಬಯಿಯಿಂದ ಇಸ್ತಂಬುಲ್‌ಗೆ ವಿಮಾನ ತಡವಾದ ಕಾರಣ ಈ ಕುಟುಂಬವು ಇಸ್ತಂಬುಲ್‌ನಿಂದ ಕಾಯ್ಸೇರಿ ವಿಮಾನವನ್ನು ತಪ್ಪಿಸಿಕೊಂಡಿದೆ. ಇದರಿಂದಾಗಿ ಬೇರೊಂದು ವಿಮಾನವನ್ನು ಬುಕ್ ಮಾಡಬೇಕಾಗಿ ಬಂದಿದೆ.

ಮರಳಿ ಸ್ವದೇಶಕ್ಕೆ ಬರುವಾಗಲೂ ಸಹ ಇಸ್ತಂಬುಲ್ – ಮುಂಬಯಿ ಫ್ಲೈಟ್ ತಡವಾಗಿ, ಮುಂಬಯಿ – ಬೆಂಗಳೂರು ವಿಮಾನ ಮಿಸ್ ಆಗಿದೆ. ಈ ವೇಳೆ ಕುಟುಂಬದ ಮೂರು ಬ್ಯಾಗುಗಳು ಮಿಸ್ಸಿಂಗ್ ಆಗಿದ್ದು ಎರಡು ದಿನ ತಡವಾಗಿ ಹಾಳಾದ ಸ್ಥಿತಿಯಲ್ಲಿ ಬಂದಿವೆ. ಕೂಡಲೇ ಕುವೈತ್ ಏರ್‌ಲೈನ್ಸ್ ಸಹಾಯವಾಣಿಗೆ ಕರೆ ಮಾಡಿದ ರಾಜೇಂದ್ರನ್ ಹೆಚ್ಚುವರಿ ವಿಮಾನಗಳ ಟಿಕೆಟ್‌ ರೀಫಂಡ್ ಮಾಡಲು ತಿಳಿಸಿದ್ದಾರೆ. ಇದಕ್ಕೆ ಕುವೈತ್‌ ಏರ್‌ಲೈನ್ಸ್‌ ನಕಾರವೆತ್ತಿದ ಕಾರಣ ನ್ಯಾಯಾಂಗ ಹೋರಾಟಕ್ಕೆ ರಾಜೇಂದ್ರನ್ ಮುಂದಾಗಿದ್ದಾರೆ.

ಮೊದಲಿಗೆ ಏರ್‌ಲೈನ್‌ನ ಅಟಾರ್ನಿಯ ಬಳಿ ಸಲ್ಲಿಸಿದ ಮನವಿ ತಿರಸ್ಕೃತಗೊಂಡ ಬಳಿಕ ಕೋರ್ಟ್ ಮೆಟ್ಟಿಲೇರಿದ ರಾಜೇಂದ್ರನ್‌ರ ವಕೀಲರು ಕುವೈತ್‌ ಏರ್‌ಲೈನ್ಸ್‌ನಿಂದಾದ ಸೇವಾ ಲೋಪವನ್ನು ನ್ಯಾಯಾಧೀಶರ ಮುಂದೆ ಪ್ರಸ್ತುತ ಪಡಿಸಿದ ಬೆನ್ನಿಗೆ, ಇದೇ ಏಪ್ರಿಲ್‌ನಲ್ಲಿ ಟಿಕೆಟ್‌ನ ರೀಫಂಡ್ ಮೊತ್ತವಾದ 59,620ರೂ, ಪರಿಹಾರದ ರೂಪದಲ್ಲಿ 25,000ರೂ ಹಾಗೂ ನ್ಯಾಯಾಂಗ ಹೋರಾಟದ ಖರ್ಚು 5,000ರೂಗಳನ್ನು ರಾಜೇಂದ್ರನ್‌ಗೆ ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read