ಬಿಸಿಲ ಬೇಗೆ ನಡುವೆ ವರ್ಷಧಾರೆ; ಬೆಂಗಳೂರಿನ ವಾತಾವರಣ ನ್ಯಾಚುರಲ್ ಎಸಿ ಎಂದ ನೆಟ್ಟಿಗರು

ಬಿಸಿಲ ಬೇಗೆಯಿಂದ ಬಳಲಿದ್ದ ಬೆಂಗಳೂರು ಕೂಲ್ ಕೂಲ್ ಆಗಿದೆ. ಶನಿವಾರ ನಗರದ ಹಲವೆಡೆ ಮಳೆಯಾಗಿದ್ದು ವಾತಾವರಣ ತಂಪಾಗಿದೆ.

ಮಳೆಯಿಂದ ತಂಪಾಗಿರುವ ನಗರದ ಆಹ್ಲಾದಕರ ಹವಾಮಾನವನ್ನು ಆನಂದಿಸುವ ವೀಡಿಯೊಗಳು ಮತ್ತು ಚಿತ್ರಗಳನ್ನು ಬೆಂಗಳೂರಿನ ನಾಗರಿಕರು ಹಂಚಿಕೊಳ್ಳುವುದರೊಂದಿಗೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿದ್ದಾರೆ. ಮಳೆಯ ನಂತರದ ವಾತಾವರಣವನ್ನು ನೈಸರ್ಗಿಕ ಎಸಿ ಎಂದು ಬಣ್ಣಿಸಿದ್ದಾರೆ.

ಮುಂಬೈನಲ್ಲಿ ಮಳೆಯಾಗಿರುವ ವರದಿಯಾಗಿದ್ದು, ಇದನ್ನ ನಗರ ನಿವಾಸಿಗಳು “ಮುಂಬೈ ಏಕೆ ಮೋಜು ಮಾಡಬೇಕು ? ತಂಪಾದ ಗಾಳಿ ಮತ್ತು ಮೋಡ ಕವಿದ ಆಕಾಶದೊಂದಿಗೆ ಬೆಂಗಳೂರು ಎಂದು” ಡ್ರೈವಿಂಗ್ ವೇಳೆ ಕಂಡ ಮಳೆ ಹನಿಗಳನ್ನು ಮತ್ತು ಬಾಲ್ಕನಿಯಲ್ಲಿ ನಿಂತು ಮಳೆ ದೃಶ್ಯವನ್ನು ಸೆರೆಹಿಡಿದಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಏಪ್ರಿಲ್ 30 ರವರೆಗೆ ಸಂಜೆ ಅಥವಾ ರಾತ್ರಿಯ ವೇಳೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read