ಆಂಧ್ರಪ್ರದೇಶ : ಕರ್ನೂಲ್ ಬಸ್ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಘಟನೆಗೆ ಇಡೀ ದೇಶವೇ ಮರುಗಿದೆ. ಬಸ್ ಗೆ ಬೆಂಕಿ ಹೊತ್ತಿಕೊಳ್ಳುವ ಸಂದರ್ಭದಲ್ಲಿ ಆಪದ್ಭಾಂಧವಂತೆ ಬಂದ ಬೆಂಗಳೂರಿನ ನೌಕರ 12 ಮಂದಿ ಪ್ರಯಾಣಿಕರನ್ನ ರಕ್ಷಿಸಿದ್ದಾನೆ.
ಅಪಘಾತ ಸಂಭವಿಸಿ ಇಡೀ ಬಸ್ ಹೊತ್ತಿ ಉರಿಯುತ್ತಿದೆ . ಈ ಸಂದರ್ಭದಲ್ಲಿ ಕಾರಿನಲ್ಲಿ ತನ್ನ ಸ್ನೇಹಿತರ ಜೊತೆ ಬರುತ್ತಿದ್ದ ಬೆಂಗಳೂರಿನ ನೌಕರ ಕೂಡಲೇ ಸಹಾಯಕ್ಕೆ ಓಡೋಡಿ ಬಂದಿದ್ದಾರೆ. ಕಾರಿನಲ್ಲಿದ್ದ ಸ್ಟೆಪ್ನಿ ಬದಲಿಸುವ ರಾಡ್ ತೆಗೆದುಕೊಂಡು ಬಸ್ ನ ಗಾಜು ಒಡೆದು 12 ಮಂದಿಯನ್ನು ರಕ್ಷಿಸಿದ್ದಾರೆ. ಇವರ ಸಾಹಸಕ್ಕೆ ಆಂಧ್ರಪ್ರದೇಶ ಸರ್ಕಾರ ಅಭಿನಂದನೆ ಸಲ್ಲಿಸಿದೆ. ಇವರ ಹೆಸರು ಹರೀಶ್ ಕುಮಾರ್. ಇವರು ಮೂಲತಹ ಆಂಧ್ರಪ್ರದೇಶದ ಧರ್ಮಾವರಂ ಜಿಲ್ಲೆಯ ಯುವಕ. ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ನಾವು ಕಾರಿನಲ್ಲಿ ಬರುತ್ತಿದ್ದಾಗ ರಸ್ತೆ ಮಧ್ಯೆ ದಟ್ಟ ಹೊಗೆ ಆವರಿಸಿತ್ತು. ಕಾರು ನಿಲ್ಲಿಸಿ ಸ್ಥಳಕ್ಕೆ ಹೋದಾಗ ಬಸ್ ಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿತ್ತು. ನಾವು ಕೂಡಲೇ ರಾಡು ತೆಗೆದುಕೊಂಡು ಬಸ್ಸಿನ ಗಾಜು ಒಡೆದು ಪ್ರಯಾಣಿಕರು ಹೊರ ಬರಲು ಸಹಾಯ ಮಾಡಿದೆವು. ಕೆಲವರಂತೂ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗುತ್ತಿದ್ದರು. ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದವು ಎಂದು ಹರೀಶ್ ಹೇಳಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		