BREAKING: ಬೆಂಗಳೂರಿನಲ್ಲಿ ತಡರಾತ್ರಿ ಯುವಕರ ಜಾಲಿ ರೈಡ್ ಗೆ ಬೈಕ್ ಸವಾರ ಬಲಿ

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಆರ್.ಆರ್. ನಗರದ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿ ಕಾರ್ ನಲ್ಲಿದ್ದ ಯುವಕ, ಯುವತಿಯರು ಜಾಲಿ ರೈಡ್ ಮಾಡಿದ್ದು, ಅವರ ಜಾಲಿ ರೈಡ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಹಿಂದಿನಿಂದ ಬಂದ ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು ಕಂಡಿದ್ದಾನೆ.

ಜೊಮ್ಯಾಟೊ ಡೆಲಿವರಿ ಬಾಯ್ ಪವನ್ ಮೃತ ದುರ್ದೈವಿ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ನಿವಾಸಿಯಾಗಿರುವ ಪವನ್ ಕಾರ್ ಡಿಕ್ಕಿ ಆದ ಬಳಿಕ ಮೃತಪಟ್ಟಿದ್ದು, ಆತನ ಮೃತದೇಹವನ್ನು 100 ಮೀಟರ್ ಕಾರ್ ಎಳೆದೊಯ್ದಿದೆ. ಕಾರ್ ಚಾಲಕ ವಿನಾಯಕ್ ನನ್ನು ಬ್ಯಾಟರಾಯನಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರ ನಿವಾಸಿಯಾದ ವಿನಾಯಕ್ ರಾಜಾಜಿನಗರದ ಮಹೀಂದ್ರ ಶೋರೂಂ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದಾರೆ.

ಯುವಕ, ಯುವತಿಯರ ಜಾಲಿ ರೈಡ್ ವೇಳೆಯಲ್ಲಿ ಬೈಕ್ ಗೆ  ಕಾರ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೈಕ್ ಸವಾರ ನರಳಾಟ ನಡೆಸಿದ್ದು, ರಕ್ತದಾನ ಮಡುವಿನಲ್ಲಿ ಬಿದ್ದಿದ್ದ ಪವನ್ ನನ್ನು ಬಿಟ್ಟು ಕಾರ್  ಸಮೇತ ಪರಾರಿಯಾಗಲು ಯತ್ನಿಸಿದವರನ್ನು ಬೆನ್ನಟ್ಟಿದ ಸ್ಥಳೀಯರು ಹಿಡಿದುಕೊಂಡಿದ್ದಾರೆ. ಸುಮಾರು ಒಂದು ಕಿಲೋಮೀಟರ್ ವರೆಗೂ ಕಾರ್ ಚೇಸ್ ಮಾಡಿದ ಸ್ಥಳೀಯರು ಆರೋಪಿ ಚಾಲಕ ವಿನಾಯಕನನ್ನು ಹಿಡಿದು ಥಳಿಸಿದ್ದಾರೆ. ಕಾರ್ ನ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾರ್ ನಲ್ಲಿದ್ದ ಮೂವರು ಯುವತಿಯರು, ಯುವಕ ಪರಾರಿಯಾಗಲೆತ್ನಿಸಿದ್ದಾರೆ. ಆರ್.ಆರ್. ನಗರ ಮೆಟ್ರೋ ನಿಲ್ದಾಣದ ಬಳಿ ರಾತ್ರಿ 1.45ರ ವೇಳೆಗೆ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read